ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಅವರ ಈ ನಿರ್ಧಾರಗಳಿಗೆ ವಿರೋದ ಪಕ್ಷಗಳಿಂದ ಟೀಕೆಗೂ ಗುರಿಯಾಗಿದ್ದಾರೆ. ಹಾಗೆಯೇ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ ಸಾಲಮಾಡಿ ದೇಶಬಿಟ್ಟು ಓಡಿಹೋಗಿದ್ದಕ್ಕೆ ಸಹ ಮೋದಿಯವರನ್ನೇ ಹೊಣೆಗಾರರನ್ನಾಗಿ ಮಾಡಿದ್ದೂ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜತಾಂತ್ರಿಕ  ಸಾಮರ್ತ್ಯವನ್ನು ಬಳಸಿಕೊಂಡು ಮಲ್ಯರವರನ್ನು ಲಂಡನ್ನಿನಲ್ಲಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆ ಜೊತೆಗೆ ನೀರವ್ ಮೋದಿಯನ್ನು ಬಂದಿಸಲು ನ್ಯಾಯಾಲಯದಿಂದ ಆದೇಶ ಹೊರಡಿಸುವಲ್ಲಿಯೂ ಯಶಸ್ಸು ಕಂಡಿದ್ದಾರೆ. ಈ ಮೂಲಕ ತಾನೊಬ್ಬ ಸಮರ್ತ ಚೌಕಿದಾರ ಎಂದು ತನ್ನ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕನಲ್ಲಿ 13000 ಕೋಟಿ ಸಾಲವನ್ನು ಮಾಡಿ ದೇಶಬಿಟ್ಟಿದ್ದ ನೀರವ್ ಮೋದಿ, ಅಕ್ರಮವಾಗಿ ಮಹಾರಾಷ್ಟ್ರದ ಅಲಿಬಾಗ್ ಕರಾವಳಿಯಲ್ಲಿ ನಿಯಂತ್ರಣ ವಲಯದ ನಿಯಮ ಉಲ್ಲಂಘಿಸಿ ಕಟ್ಟಿದ್ದ ಬಂಗಲೆಯನ್ನು ಮಾ.7 ರಂದು ಜಿಲ್ಲಾಡಳಿತ  ನೆಲಸಮಗೊಳಿಸಿ ಸುದ್ದಿ ಮಾಡಿತ್ತು. ನರೇಂದ್ರ ಮೋದಿಯವರ ಸರಕಾರದ ಮನವಿಯ ಮೇರೆಗೆ ಇಂಗ್ಲೆಂಡಿನ ವೆಸ್ಟ್ ಮಿನಿಸ್ಟರ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಹೊರಡಿಸುವ ಮೂಲಕ ಬಂದಿಸಿ ಒಳತಳ್ಳಿದೆ.

ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡು ಆರಾಮವಾಗಿ ಇದ್ದ ನೀರವ್ ಮೋದಿಯನ್ನು ಮೋದಿಯನ್ನು ತನಗೊಪ್ಪಿಸುವಂತೆ ಭಾರತ ಸರಕಾರ ಮನವಿ ಮಾಡಿಕೊಂಡಿತ್ತು. ಈ ಮನವಿ ಪುರಸ್ಕರಿಸಿ ಈ ಆದೇಶವನ್ನು ಹೊರಡಿಸಲಾಗಿದೆ. ಅಲ್ಲದೇ ಕೋರ್ಟ್ ಈ ವಿಚಾರವಾಗಿ ನೀರವ್ ಮೋದಿಯನ್ನು 24 ಗಂಟೆಯೋಳಗ ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಂತೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 24 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಮೋದಿಯವರ ಸರಕಾರದ ಅವಧಿಯಲ್ಲಿ ರಾಜತಾಂತ್ರಿಕ ವ್ಯವಹಾರ ಎಷ್ಟು ಬಲಿಷ್ಠವಾಗಿದೆ ಎಂದು ಈ ಮೂಲಕ ತಿಳಿದುಕೊಳ್ಳಬಹುದು. ಮೊದಲಿನಿಂದಲೂ ಮೋದಿಯವರು ಎದುರಾಳಿಯು ಎಸೆದ ಕಲ್ಲನ್ನೆ ತನ್ನ ಕಟ್ಟಡ ನಿರ್ಮಾಣದ ಕಲ್ಲನ್ನಾಗಿ ಬಳಸಿಕೊಳ್ಳುತ್ತ ಬಂದಿದ್ದಾರೆ. ಈ ವಿಚಾರವೇ ಅದಕ್ಕೆ ಸಾಕ್ಷಿ. ಚುನಾವಣೆಯ ಈ ಹೊಸ್ತಿಲಲ್ಲಿ ನೀರವ್ ಮೋದಿಯನ್ನು ಬಂದಿಸಿರುವುದು ಅವರಿಗೆ ಎಷ್ಟರ ಮತ್ತುಗೆ ಫ್ಲಸ್ ಪಾಯಿಂಟ್ ಆಗಬಹುದೆಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿರಿ:ಭಾರತದ “ಮಿಶನ್ ಶಕ್ತಿ” ಯಶಸ್ವಿ ಪರೀಕ್ಷೆಯ ನಂತರ ಬಯಬಿದ್ದು ಉನ್ನತ ಮಟ್ಟದ ಭದ್ರತಾ ಸಭೆ ಕರೆದ ಇಮ್ರಾನ್ ಖಾನ್
SPONSORED CONTENT

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here