ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಚಿವ ಸಂಪುಟ ವಿಸ್ತರಣೆ ನಡೆಸಲು ತೀರ್ಮಾನಿಸಿದ್ದು, ಅದಕ್ಕೂ ಮುನ್ನ ಕೆಲ ಸಚಿವರ ರಾಜಿನಾಮೆಯನ್ನು ಪಡೆದಿದ್ದಾರೆ.
ಕೇಂದ್ರ ಸಂಪುಟ ಸೇರಲಿರುವ ಮಂತ್ರಿಗಳ ಶಪಥ ಗ್ರಹಣ ಸಮಾರಂಭವು ಬುಧವಾರ ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಇಬ್ಬರು ಸಚಿವರ ನಿಧಾನ, ಶಿವಸೇನೆ ಮತ್ತು ಅಕಾಲಿದಳ ಮೈತ್ರಿಯನ್ನು ಮುರಿದುಕೊಂಡು ಹೋಗಿದ್ದರಿಂದ ತೆರವಾದ ಹಾಗೂ ಖಾಲಿಯಿರುವ ಒಟ್ಟು 28 ಸ್ಥಾನಗಳನ್ನು ತುಂಬಬಹುದಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಸದ್ಯ ಮೋದಿ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿರಿ: Modi Cabinet Reshuffle: ಮೋದಿ ಸಚಿವ ಸಂಪುಟ ವಿಸ್ತರಣೆ; ರಾಜ್ಯದ ನಾಲ್ವರು ಸಂಸದರಿಗೆ ಅವಕಾಶ !
ಕೇಂದ್ರ ನೂತನ ಸಚಿವರ ಶಪಥ ಗ್ರಹಣ ಸಮಾರಂಭಕ್ಕೂ ಮುನ್ನ ಕೆಲ ಸಚಿವರು ರಾಜೀನಾಮೆ ನೀಡಿದ್ದು, ಖಾಲಿಯಾದ ಸ್ಥಾನವನ್ನು ಹೊಸ ಅಭ್ಯರ್ಥಿಗಳು ತುಂಬಲಿದ್ದಾರೆ. ಇಂದು ಕೇಂದ್ರ ಮಂತ್ರಿಮಂಡಲದ ಕೆಲ ಸಚಿವರು ರಾಜೀನಾಮೆ ನೀಡಿದ್ದು, ಅವರ ಹೆಸರುಗಳು ಹೀಗಿವೆ…
- ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಭಲೀಕರಣ ಸಚಿವ ತಾವರ್ಚಂದ್ ಗೆಹ್ಲೋಟ್.
- ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ.
- ಮಹಿಳಾ ಮತ್ತು ಮಕ್ಕಳ ಖಾತೆ ರಾಜ್ಯ ಸಚಿವೆ ದೇಬಶ್ರೀ ಚೌಧರಿ.
- ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ .
- ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್.
- ಆರೋಗ್ಯ ಸಚಿವ ಡಾ. ಹರ್ಷವರ್ಧನ್.
- ಸಂಜಯ್ ಧೋತ್ರೆ, ರತನ್ ಲಾಲ್ ಖತಾರಿಯಾ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿರಿ: SSLC Exams 2021: ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡುವಂತೆ ಹೈಕೋರ್ಟ್ಗೆ ಅರ್ಜಿ