minister-dr-k-sudhakar-visits-inspects-c-v-raman-hospital-indiranagar

ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆಗಳು ರೋಗಿಗಳನ್ನು ನಿರ್ಲಕ್ಷಿಸುತ್ತಿವೆ ಎನ್ನುವ ಮಾದ್ಯಮಗಳ ವರದಿಯ ಹಿನ್ನೆಲೆಯಲ್ಲಿ ಇಂದು ಸಚಿವ ಸುಧಾಕರ್ ಅವರು ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಚಿವರ ದಿಡೀರ್ ಬೇಟಿಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆಯ ಕುರಿತಾಗಿ ರೋಗಿಗಳ ಜೊತೆಯಲ್ಲಿ ವಿಡಿಯೋ ಕಾಲ್ ಮಾಡಿ ಮಾಹಿತಿಗಳನ್ನು ತಿಳಿದುಕೊಂಡರು. ಇದೇ ಸಮಯದಲ್ಲಿ ತಜ್ಞವೈದ್ಯರಿಂದ ಆಸ್ಪತ್ರೆಯ ಆಗುಹೋಗುಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು. ಪರಿಶೀಲನೆಯ ಸಮಯದಲ್ಲಿ ಹಲವಾರು ಲೋಪಗಳು ಕಂಡುಬಂದವು.

ಹೈ ಪ್ಲೋ ಆಕ್ಸಿಜನ್ ಸೌಲಭ್ಯ ಹೊಂದಿರುವ ಹದಿನೈದು ಹಾಸಿಗೆಗಳು ಕಾಲಿಇದ್ದರೂ ಸಹ ಕೇವಲ ಇಬ್ಬರು ರೋಗಿಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗಿತ್ತು. ಹಾಗೆಯೇ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಲಘು ಮತ್ತು ಮಧ್ಯಮ ರೋಗಲಕ್ಷಣ ಇದ್ದವರನ್ನೂ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸದೆ ಇಲ್ಲಿಯೇ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ. ಇವುಗಳನ್ನು ಗಮನಿಸಿದ ಡಾ. ಸುಧಾಕರ್ ಅಧೀಕ್ಷಕರು ಮತ್ತು ಸಿಬ್ಬಂದಿಗಳ ವಿರುದ್ಧ ಹರಿಹಾಯ್ದು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸ್ವಾಬ್ ಸಂಗ್ರಹದ ವಿಷಯದಲ್ಲಿಯೂ ಕಡಿಮೆ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂತು. ದಿನಕ್ಕೆ ಕನಿಷ್ಠ 500 ಸ್ಯಾಂಪಲ್ ಸಂಗ್ರಹಿಸುವಂತೆ ಸೂಚನೆಯನ್ನು ನೀಡಿದರು. ಇದಲ್ಲದೇ ಅನಸ್ತೇಷಿಯಾ ವಿಭಾಗದಲ್ಲಿ ಆರು ತಜ್ಞರು ಇದ್ದರೂ ವೆಂಟಿಲೇಟರ್ ಅಳವಡಿಕೆಯಲ್ಲಿ ತಡವಾಗಿರುವ ಕುರಿತು ಪ್ರಶ್ನಿಸಿದರು. ಹೀಗಿರುವಾಗ ಅನಸ್ತೇಷಿಯಾ ತಜ್ಞರನ್ನು ಅಗತ್ಯವಿರುವ ಬೇರೆ ಆಸ್ಪತ್ರೆಗೆ ನಿಯೋಜಿಸದಿರುವುದು ಸಚಿವರ ಗಮನಕ್ಕೆ ಬಂತು. ಈ ಎಲ್ಲ ನಿರ್ಲಕ್ಷ್ಯಗಳ ವಿರುದ್ಧ ಸಚಿವರು ಗರಂ ಆಗಿದ್ದರು. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತ್ತಿನಲ್ಲಿ ಇರಿಸುವಂತೆ ಅಪಾರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆಯನ್ನು ನೀಡಿದರು. ಈ ಸಂದರ್ಭದಲ್ಲಿ ವೈದ್ಯಕೀಯಅಧಿಕ್ಷಕರಾದರಾಧಾಕೃಷ್ಣ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here