‘ಕೊರೋನಾದಿಂದ ದೇವರೇ ಕಾಪಾಡಬೇಕು’ ಹೇಳಿಕೆಗೆ ಶ್ರೀರಾಮಲು ಸ್ಪಷ್ಟನೆ

minister-b-sriramulu-clarification-on-only-god-can-save-us-remark

ಬೆಂಗಳೂರು: ‘ಕೊರೋನಾದಿಂದ ದೇವರೇ ಕಾಪಾಡಬೇಕು’ ಎಂಬ ಹೇಳಿಕೆಯನ್ನು ಆಡಳಿತ ಪಕ್ಷದ ಸಚಿವರಾಗಿ ಹೇಳಿಕೆ ನೀಡಿದ್ದಾರೆ, ಸರಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದ್ದು, ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ವಿರೋಧಪಕ್ಷಗಳು ಒಂದೇ ಸಮನೆ ಒತ್ತಾಯವನ್ನು ಮಾಡಿದ್ದವು. ಈ ಹೇಳಿಕೆಯು ತೀವ್ರ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮಲು ತಮ್ಮ ಹೇಳಿಕೆಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಇದು ಕೇವಲ ಶ್ರೀರಾಮಲು ಅವರ ಹೇಳಿಕೆಯಲ್ಲ, ಇದು ಸರಕಾರದ ಮಾತಾಗಿದೆ. ಕರ್ನಾಟಕ ಸರಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದೆ. ಶ್ರೀರಾಮಲು ಮತ್ತು ಅವರ ಸರಕಾರ ರಾಜಿನಾಮೆ ಕೊಟ್ಟು ಹೋಗಬೇಕೆಂದು ಡಿಕೆ ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ತನ್ನ ಹೇಳಿಕೆಯಿಂದ ಸರಕಾರಕ್ಕೆ ಡ್ಯಾಮೇಜ್ ತರುತ್ತಿದೆ ಎಂದು ಗೊತ್ತಾದ ತಕ್ಷಣ ಶ್ರೀರಾಮಲು ಅವರು ಟ್ವಿಟ್ಟರ್ ಮೂಲಕ ಸ್ಪಷ್ಟೀಕರ ನೀಡಿದ್ದಾರೆ. “ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವುಗಳು, ಸೋಂಕು ತಡೆಗಟ್ಟುವಲ್ಲಿ ಜನರಲ್ಲಿ ಜಾಗೃತಿ ಬರಬೇಕು. ಸೋಂಕು ತಡೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ, ಎಂದು ಹೇಳುವ ಸಂದರ್ಭದಲ್ಲಿ ಇನ್ನೂ ಎಡವಿದರೆ ದೇವರೇ ಕಾಪಾಡಬೇಕು ಎಂದು ಹೇಳಿದ ಎಚ್ಚರಿಕೆಯ ಮಾತುಗಳು ಅವು” ಎಂದು ಹೇಳಿದ್ದಾರೆ.

ಇದರೊಂದಿಗೆ ಮುಂದುವರೆದು, “ಸರ್ಕಾರ, ನಮ್ಮ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹಾಗೂ ಸಚಿವರುಗಳು ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. ಈ ಶತಮಾನದ ಸವಾಲೊಂದನ್ನು ಸಮರ್ಥವಾಗಿ ಎದುರಿಸಿ ಗೆಲ್ಲಲು, ಜನರಿಗಾಗಿ ದುಡಿಯುತ್ತಿದ್ದೇವೆ. ತಪ್ಪಾಗಿ ಅರ್ಥೈಸಲಾದ ಮಾತಿಗೆ ನನ್ನ ಸ್ಪಷ್ಟನೆ” ಎಂದು ಹೇಳಿಕೆಯನ್ನು ನೀಡಿದ್ದಾರೆ. 

ಶ್ರೀರಾಮಲು ರಾಜಿನಾಮೆ ನೀಡಲಿ: ಡಿ ಕೆ ಶಿವಕುಮಾರ್

ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಸಮರ್ತವಾಗಿ ನಿರ್ವಹಿಸಲು ನಮ್ಮಿಂದ ಸಾಧ್ಯವಿಲ್ಲ, ನಮ್ಮನ್ನು ಕೊರೋನಾದಿಂದ ದೇವರೇ ಕಾಪಾಡಬೇಕು ಎಂದು ಹೇಳುವ ಇಂತವರು ಅಧಿಕಾರದಲ್ಲಿ ಯಾಕಿರಬೇಕು ? ಇದು ಕೇವಲ ಶ್ರೀರಾಮಲು ಹೇಳಿಕೆಯಲ್ಲ, ಇಡೀ ಸರಕಾರದ ಹೇಳಿಕೆ. ಇಂತವರು ಅಧಿಕಾರದಲ್ಲಿ ಯಾಕಿರುವುದು ? ರಾಜೀನಾಮೆ ನೀಡಿ ಹೋಗಲಿ ಎಂದು ಡಿ ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here