ಚೆನ್ನೈ ಮೇ 16: ಕೊರೊನಾ ಸೋಂಕಿಗೆ ತುತ್ತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಟೀಮಿನಲ್ಲಿ ಮೈಕಲ್ ಹಸ್ಸಿ ಸೇರಿ ಮೂವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಸೋಂಕಿನಿಂದ ತೊಂದರೆ ಅನುಭವಿಸಿದ್ದ ಹಸ್ಸಿ ಅವರನ್ನು ಚೆನ್ನೈನ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಹಸ್ಸಿ ಅವರ ಕೋವಿಡ್ ಪರೀಕ್ಷೆಯಲ್ಲಿ ನೆಗೇಟಿವ್ ಬಂದಿದೆ.
ಕೊರೊನಾ ವೈರಸ್ನ ಎರಡನೇ ಅಲೆ ಭಾರತದಲ್ಲಿ ಸಂಕಷ್ಟ ಉಂಟುಮಾಡಿರುವ ಹಿನ್ನೆಲೆಯಲ್ಲಿ ಭಾರತದಿಂದ ತನ್ನ ದೇಶಕ್ಕೆ ಯಾರೂ ಬರದಂತೆ ತಡೆಹಿಡಿದಿತ್ತು. ಇದೇ ಕಾರಣಕ್ಕೆ ಟೂರ್ನಿ ಅರ್ಧಕ್ಕೆ ನಿಂತಾಗ ಆಸೀಸ್ ಆಟಗಾರರು, ಕಾಮೆಂಟೇಟರ್ಸ್ ಮತ್ತು ಸಿಬ್ಬಂದಿ ಬಳಗಕ್ಕೆ ತಾಯ್ನಾಡಿಗೆ ಹಿಂದಿರುಗಲು ಸಾಧ್ಯವಾಗಿರಲ್ಲಿ.
ಇದನ್ನೂ ಓದಿರಿ: ಕೊರೋನಾ ಮಧ್ಯೆ ರೈತರಿಗೆ ಗುಡ್ ನ್ಯೂಸ್: ಪಿ ಎಂ ಕಿಸಾನ್ ನಿಧಿ ಬಿಡುಗಡೆ
ಬಿಸಿಸಿಐ ಆಸೀಸ್ ಬಳಗಕ್ಕೆ ಮಾಲ್ಡೀವ್ಸ್ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿತ್ತು. ಆಟಗಾರರು, ಕೋಚ್, ಕಾಮೆಂಟೇಟರ್ಸ್ ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಆಸ್ಟ್ರೇಲಿಯಾದ ಒಟ್ಟು 38 ಮಂದಿ ಸೋಮವಾರ ತಾಯ್ನಾಡಿಗೆ ಹಿಂದಿರುಗಲಿದ್ದಾರೆ. ಮೈಕಲ್ ಹಸ್ಸಿ ಚೆನ್ನೈನಲ್ಲಿ ಐಸೊಲೇಷನ್ನಲ್ಲಿ ಇದ್ದು, ಆಸ್ಟ್ರೇಲಿಯಾಗೆ ದೋಹಾ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.
ಆಸ್ಟ್ರೇಲಿಯಾ, ಮೇ 15ರಂದು ಭಾರತದಿಂದ ಬರುವವರ ಮೇಲಿನ ನಿಷೇಧವನ್ನು ಹಿಂಪಡೆದಿದೆ. ಹೀಗಾಗಿ ಐಪಿಎಲ್ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯನ್ನರು ತಾಯ್ನಾಡಿಗೆ ಮರಳಲು ಸಾಧ್ಯವಾಗಿದೆ.