meeting-between-sudhakar

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಶ್ರೀರಾಮಲು ಮತ್ತು ಡಾ. ಸುಧಾಕರ್ ಅವರನ್ನು ಮುಖಾಮುಖಿ ಕೂರಿಸಿ ಸಂಧಾನ ನಡೆಸಿದ್ದು, ಯಶಸ್ಸನ್ನು ಗಳಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಶ್ರೀರಾಮಲು ಮುಖ್ಯಮಂತ್ರಿಗಳು ನೀಡಿರಿವ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೇನೆ, ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.

ನಾನು ಮುಖಮಂತ್ರಿಗಳಲ್ಲಿ ಈ ಮೊದಲು ಸಮಾಜಕಲ್ಯಾಣ ಇಲಾಖೆಯನ್ನು ನನಗೆ ಕೊಡುವಂತೆ ಕೇಳಿದ್ದೆ, ಆದರೆ ಹಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ. 2008-09 ರಲ್ಲಿ ಉತ್ತಮ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನನಗೆ ಆರೋಗ್ಯ ಇಲಾಖೆಯನ್ನು ನೀಡಿದ್ದರು. ಬಡಜನರಿಗಾಗಿ ಕೆಲಸ ಮಾಡಲು ಯಡಿಯೂರಪ್ಪನವರು ನಿರ್ಧರಿಸಿರುವುದರಿಂದ ಸಮಾಜ ಕಲ್ಯಾಣ ಇಲಾಖೆಯನ್ನ ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಶಕ್ತಿ ಮೀರಿ ಕೆಲಸಮಾಡಲು ಪ್ರಯತ್ನಿಸಿದ್ದೇನೆ. ಈಗ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಶ್ರೀರಾಮಲು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಡಾ. ಸುಧಾಕರ್ ಅವರು ಸ್ವತಃ ವೈದ್ಯರಿದ್ದಾರೆ, ಈ ಕಾರಣದಿಂದಾಗಿ ಅವರು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎರಡನ್ನೂ ನಿರ್ವಹಿಸಿದರೆ ಕೆಲಸ ಮಾಡಲೂ ಸುಲಭವಾಗುತ್ತದೆ. ಈ ನಿರ್ಧಾರದಿಂದ ಸುಧಾಕರ್ ಅವರು ಕೊರೋನಾ ಸಂಕಷ್ಟದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ನೆರವಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಬಿತ್ತರವಾಗಿರುವಂತೆ ನನಗೆ ಈ ವಿಷಯದಲ್ಲಿ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ಇದೆ ಸಮಯದಲ್ಲಿ ಮಾತನಾಡಿದ ಡಾ. ಸುಧಾಕರ್ ಅವರು, ಶ್ರೀರಾಮಲು ಅವರು ನನಗಿಂತ ಹಿರಿಯರು, ಹಿಂದುಳಿದ ವರ್ಗದ ಪ್ರಮುಖ ನಾಯಕರು. ಹಲವಾರು ಕಾರಣಗಳಿಂದ ಸಂಪುಟ ವಿಸ್ತರಣೆ ವಿಳಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖ್ಯೆಯಲ್ಲಿ ಕೆಲವರ್ಗದಲ್ಲಿ ಸಮಸ್ವಯದ ಕೊರತೆ ಕಂಡುಬರುತ್ತಿರುವುದರಿಂದ ಮುಖ್ಯಮಂತ್ರಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ನಾವಿಬ್ಬರೂ ಹೊಂದಾಣಿಕೆ ಮಾಡಿಕೊಂಡು ಉತ್ತಮವಾಗಿಯೇ ಕಾರ್ಯನಿರ್ವಹಿಸಿದ್ದೇವೆ. ನಮಗೆ ನೀಡಿದ ಕಾರ್ಯವನ್ನು ಕಳೆದ ಏಳು ತಿಂಗಳಿನಿಂದ ಉತ್ತಮವಾಗಿಯೇ ನಿರ್ವಹಿಸಿಕೊಂಡು ಬಂದಿದ್ದೇವೆ. ಇದರಲ್ಲಿ ಯಾರು ಹೆಚ್ಚು, ಯಾರು ಕಡಿಮೆಯಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಬಡವರ ಉದ್ದಾರಕ್ಕಾಗಿ ಅತ್ಯಂತ ದೊಡ್ಡ ಮತ್ತು ಜವಾಬ್ದಾರಿಯುತ ಸ್ಥಾನವನ್ನ ಶ್ರೀರಾಮಲು ಅವರಿಗೆ ನೀಡುತ್ತಾ ಇದ್ದಾರೆ. ಬಾರಿ ನೀರಾವರಿ ಮತ್ತು ಪಿ ಡಬ್ಲ್ಯೂ ಡಿ ನಂತರದ ಅತೀ ದೊಡ್ಡ ಇಲಾಖೆ ಇದಾಗಿದೆ. ಮಾಧ್ಯಮಗಳಲ್ಲಿ ತೋರಿಸಿರುವಂತೆ ಇದು ಅವರಿಗೆ ಡಿಮೋಷನ್ ಅಲ್ಲ, ಪ್ರಮೋಷನ್ ನೀಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here