ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ.
ಟೋಕಿಯೊ ಕ್ರೀಡಾಕೂಟವು ಜುಲೈ 23 ರಂದು ಪ್ರಾರಂಭವಾಗಲಿದೆ. ಕ್ರೀಡಾಕೂಟದಲ್ಲಿ 100ಕ್ಕೂ ಹೆಚ್ಚು ಭಾರತೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ‘ಲಿಂಗ ಸಮಾನತೆ’ಯನ್ನು ಖಚಿತಪಡಿಸಿಕೊಳ್ಳಲು ಭಾರತವು ಒಂದು ಗಂಡು, ಮತ್ತು ಓರ್ವ ಮಹಿಳೆ ಇಬ್ಬರು ಧ್ವಜ ಧಾರಕರನ್ನು ಹೊಂದಿರಲಿದೆ.
ಇದಲ್ಲದೆ ಕುಸ್ತಿಪಟು ಭಜರಂಗ್ ಪುನಿಯಾ ಆಗಸ್ಟ್ 8 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಧ್ವಜ ಧಾರಕರಾಗಲಿದ್ದಾರೆ.
ಇದನ್ನೂ ಓದಿರಿ: 2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್ಗೆ ತಿಳಿಸಿದ ಸರ್ಕಾರ