ಟೋಕಿಯೋ : ಒಲಂಪಿಕ್ಸ್ ಪಂದ್ಯದಲ್ಲಿ ಪದಕಗಳಿಸುವ ನಿರೀಕ್ಷೆಯನ್ನು ಮೂಡಿಸಿದ್ದ ಭಾರತೀಯ ಶೂಟರ್ ಗಳಾದ ಸೌರಭ್ ಚೌಧರಿ ಮತ್ತು ಮನು ಭಾಕರ್ ಅರ್ಹತಾ ಸುತ್ತಿನಲ್ಲಿ ಎಡವಿದ್ದಾರೆ.
ಟೋಕಿಯೋ ಒಲಂಪಿಕ್ಸ್ ನ ಐದನೆಯ ದಿನವಾದ ಇಂದು ಶೂಟರ್ ಗಳ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಮೊದಲ ಹಂತದ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ, ಮೊದಲ ಸಥಾನ ಗಳಿಸಿದ್ದರು. ಆದರೆ ಅರ್ಹತಾ ಸುತ್ತಿನ ಎರಡನೇಯ ಪಂದ್ಯದಲ್ಲಿ ಗುರಿ ಸಾಧಿಸಲು ವಿಫಲರಾಗಿದ್ದಾರೆ.
ಇಂದು ಹಲವು ವಿಭಾಗದ ಆಟಗಳಲ್ಲಿ ಭಾರತೀಯರು ಭಾಗಿಯಾಗಲಿದ್ದು, ಹಲವು ಪದಕಗಳು ಬರಲಿವೆ ಎಂದು ಹೇಳಲಾಗುತ್ತಿತ್ತು, ಆದರೆ ಭಾರತೀಯರ ಪದಕ ಬೇಟೆಗೆ ಇಲ್ಲಿಯವರೆಗೆ ನಿರಾಶೆ ಉಂಟಾಗಿದೆ. ಇನ್ನು ಬ್ಯಾಡ್ಮಿಂಟನ್, ಕುಸ್ತಿ ಮತ್ತು ಬಾಕ್ಸಿಂಗ್ ವಿಭಾಗದ ಆಟಗಳು ನಡೆಯಬೇಕಿದ್ದು, ಅವುಗಳಲ್ಲಿಯಾದರೂ ಪದಕಗಳು ಒಲಿದು ಬರಲಿ ಎನ್ನುವುದು ಭಾರತೀಯರ ಆಶಯವಾಗಿದೆ.
ಇದನ್ನೂ ಓದಿರಿ : ವೇಟ್ ಲಿಪ್ಟರ್ ಮೀರಾಬಾಯಿ ಚಾನು ಅವರಿಗೆ 1 ಕೋಟಿ ಬಹುಮಾನ ಘೋಷಣೆ