ಮಂಗಳೂರು: ಕುಕ್ಕರ್ ಹಿಡಿದು ನಿಂತ ಶಾರಿಕ್ ಫೋಟೋಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮೊದಲಿಗೆ ಇದು ಸೆಲ್ಫಿ ಫೋಟೋ ಎಂದು ಹೇಳಲಾಗುತ್ತಿತ್ತು. ಆದರೆ ಅದು ಸೆಲ್ಫಿ ಫೋಟೋ ಅಲ್ಲ ಎಂದು ಇದೀಗ ತಿಳಿದು ಬಂದಿದೆ.
ಆಟೋ ರಿಕ್ಷಾದಲ್ಲಿ ಬಾಂಬ್ ಬ್ಲಾಸ್ಟ್ ಆದ ನಂತರ ತನಿಖೆ ಆರಂಭವಾಯಿತು. ನಂತರ ಬ್ಲಾಸ್ಟ್ ಸಮಯದಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶಾರಿಕ್ ವಿದ್ವಾಂಸಕ ಕೃತ್ಯ ನಡೆಸಲು ಸ್ಕೆಚ್ ಹಾಕಿದ್ದ ವಿಚಾರ ಬಯಲಿಗೆ ಬಂದಿತ್ತು. ಈ ನಡುವೆ ಶಾರಿಕ್ ಕುಕ್ಕರ್ ಬಾಂಬ್ ಹಿಡಿದು ನಿಂತಿರುವ ಸೆಲ್ಫಿ ಫೋಟೋ ಎಂದು ಎಲ್ಲೆಡೆ ವೈರಲ್ ಆಗಿತ್ತು.
ಇದೀಗ ಕುಕ್ಕರ್ ಹಿಡಿದು ನಿಂತ ಶಾರಿಕ್ ಫೋಟೋ ಸೆಲ್ಫಿ ಅಲ್ಲ, ಇದು ಮೊಬೈಲ್ ನ ಬ್ಯಾಕ್ ಕೆಮರಾದಿಂದ ತೆಗೆದ ಫೋಟೋ ಎಂದು ಪೊಲೀಸರು ಶಂಕಿಸಿದ್ದಾರೆ. ಬೇರೊಬ್ಬ ವ್ಯಕ್ತಿ ಈ ಫೋಟೋವನ್ನು ತೆಗೆದಿರಬಹುದು ಎಂಬುದು ಪೋಲೀಸರ ಅನುಮಾನ. ಆ ವ್ಯಕ್ತಿ ಯಾರಿರಬಹುದು ಎಂಬ ಕುರಿತು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿರಿ: ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ವಿಧಿವಶ
ಉಡುಪಿ ಮಠಕ್ಕೆ ಶಾರಿಕ್ ಭೇಟಿ
ಈ ನಡುವೆ ಶಾರಿಕ್ ಮತ್ತು ಆತನ ಟೀಮ್ ದೇವಾಲಯ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಯೋಜಿಸಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಈ ಸುದ್ದಿಗೆ ಪುಷ್ಟಿ ದೊರೆತಿದ್ದು, ಅಕ್ಟೋಬರ್ 16 ರಂದು ಉಡುಪಿಯ ಕಾರ್ ಸ್ಟ್ರೀಟ್ ಪ್ರದೇಶಕ್ಕೆ ಬಂದು ಕಾರ್ಕಳ ಮತ್ತು ಬಂಟ್ವಾಳಕ್ಕೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದ ಕಾರ್ ಸ್ಟ್ರೀಟ್ ಪ್ರದೇಶದ ಅಂಗಡಿಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯವೊಂದರಲ್ಲಿ ಆತನ ಚಲನವಲನ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಠಕ್ಕೆ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.