ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್‌ನನ್ನು ಉಗ್ರ ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ‘ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಮುಂಬೈ ಆಟ್ಯಾಕ್ ಅಥವಾ ಪುಲ್ವಾಮಾಘಟನೆ ಆದಂತೆ ಆಗಲಿಲ್ಲ. ಅದೇಗೆ ಕುಕ್ಕರ್ ಟೆರರಿಸ್ಟ್ ಅಂತ ಘೋಷಣೆ ಮಾಡಿದ್ರಿ. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಷ್ಟು ಸ್ಪೀಡ್ ಆಗಿ ಹೇಗೆ ಟ್ವೀಟ್ ಮಾಡಿದ್ರು’ ಎಂದು ಪ್ರಶ್ನಿಸಿದ್ದಾರೆ.
ಇದೆ ಸಮಯದಲ್ಲಿ ಮಾತನ್ನು ಮುಂದುವರೆಸಿ, ‘ಬೆಂಗಳೂರಿನ ವೋಟರ್ ಐಡಿ ಹಗರಣವನ್ನು ಡೈವರ್ಟ್ ಮಾಡಲು ಬಿಜೆಪಿ ಈ ಪ್ರಕರಣವನ್ನು ಹೈಲೈಟ್ ಮಾಡಿದೆ. ಶಿವಮೊಗ್ಗ, ಮಂಗಳೂರು, ಮಲೆನಾಡು ಭಾಗದಲ್ಲಿ ಯಾಕೆ ತನಿಖೆ ಮಾಡಲಿಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಸರ್ಕಾರ ಆಟ ಆಡುತ್ತಿದೆ’ ಎಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿರಿ: ಶಾರೀಖ್ ಕುರಿತು ಡಿಕೆಶಿ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ