mandya-mp-sumalatha-ambarish-tests-positive-for-covid-19

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಜುಲೈ 4 ರಂದು ತಲೆನೋವು ಕಾಣಿಸಿಕೊಂಡ ಕಾರಣ ಕೊರೊನಾ ತಪಾಸಣೆ ಮಾಸಿಡಿಕೊಂಡಿದ್ದಾರೆ. ಇಂದು ಆ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಆಗಿದೆ.

ನಿರಂತರವಾಗಿ ಕ್ಷೇತ್ರದ ಕಾರ್ಯಗಳಲ್ಲಿ ಭಾಗವಹಿಸಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿದ್ದರಿಂದ ಸೋಂಕು ತಗುಲಿರಬಹುದು ಎಂದುಹೇಳಲಾಗಿದೆ. ಈ ವಿಚಾರವನ್ನು ತಮ್ಮ ಫೆಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ತಮ್ಮನ್ನು ಬೇಟಿಯಾದವರ ಮಾಹಿತಿಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ, ತಮ್ಮಲ್ಲಿ ಯಾರಿಗಾದರೂ ಅನಾರೋಗ್ಯ ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸಧ್ಯ ಅವರು ಮನೆಯಲ್ಲಿಯೇ ಕ್ವಾರನಟೈನ್ ಆಗಿದ್ದು, ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರೋಗನಿರೋಧಕ ಶಕ್ತಿಯು ಪ್ರಬಲವಾಗಿರುವುದರಿಂದ ಮತ್ತು ತಮ್ಮೆಲ್ಲರ ಆಶೀರ್ವಾದದಿಂದ ಶೀಗ್ರವೇ ಗುಣಮುಖ Sಆಗುತ್ತೇನೆ. ತಮ್ಮೆಲ್ಲರ ಹಾರೈಕೆ ಇರಲಿ ಎಂದು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here