ಆಗ್ರಾ: ಜಗತ್ತಿನ ಅದ್ಭುತ ಕಟ್ಟಡಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್ಮಹಲ್ ಗೆ ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಸೀಜ್ ಮಾಡುವ ಕುರಿತು ಎಚ್ಚರಿಕೆ ನೀಡಿದೆ.
ಆಗ್ರಾದಲ್ಲಿರುವ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಸಂಕಷ್ಟ ಎದುರಾಗಿದ್ದು, ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತಾಜ್ ಮಹಲ್ಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಅದೂ ಕೂಡ ಬರೊಬ್ಬರಿ 1.5 ಲಕ್ಷ ಆಸ್ತಿ ತೆರಿಗೆ ಮತ್ತು 1.9 ಕೋಟಿ ರೂ ನೀರಿನ ತೆರಿಗೆ, ರೂ. ಅನ್ನು ಕೂಡಲೇ ಪಾವತಿಸುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 15 ರೊಳಗೆ ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ:ನಿಮ್ಮ ಮೊಬೈಲ್ ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಮರೆತು ಈ ತಪ್ಪು ಮಾಡಬೇಡಿ!