ಬೆಂಗಳೂರು: ಭಘೀರ ಚಿತ್ರದ ಫೈಟ್ ಸೀನ್ ಚಿತ್ರೀಕರಿಸುವ ಸಮಯದಲ್ಲಿ ನಟ ಶ್ರೀಮುರಳಿ ಅವರಿಗೆ ಕಾಲಿಗೆ ಏಟಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸಿನಿಮಾದಲ್ಲಿ ಫೈಟ್ ಸೀನ್ ನೋಡಿ ನಾವೆಲ್ಲಾ ಖುಷಿ ಪಡುತ್ತೇವೆ ಆದರೆ ಅದರ ಚಿತ್ರೀಕರಣದ ಹಿಂದೆ ಹಲವರ ಶ್ರಮ ಇರುತ್ತದೆ. ಚಿತ್ರೀಕರಣದ ಸಮಯದಲ್ಲಿ ಹೀಗೆ ಹಲವಾರು ಗಾಯಗೊಂಡಿರುತ್ತಾರೆ. ಸದ್ಯ ಹೊಂಬಾಳೆ ಚಿತ್ರ ನಿರ್ಮಾಣದಲ್ಲಿ ಶ್ರೀಮುರಳಿ ಅಭಿನಯಿಸುತ್ತಿದ್ದು, ಫೈಟ್ ಸೀನ್ ಚಿತ್ರಿಸುವ ಸಮಯದಲ್ಲಿ ಗಾಯಗೊಂಡಿದ್ದಾರೆ.
ಕಳೆದ ಬಾರಿ ಮದಗಜ ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ಚಿಕಿತ್ಸೆ ಪಡೆದು ಗುಣವಾಗಿದ್ದರು. ಇದೀಗ ಅದೇ ಕಾಲಿಗೆ ಮತ್ತೆ ಗಾಯವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿರಿ: ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕಾಂತಾರ: ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನ