lpg-customers-will-have-to-adopt-this-process-from-november-1-otherwise-cylinder-will-not-be-available-01

ನವದೆಹಲಿ: ನವೆಂಬರ್ ಒಂದರಿಂದ ತೈಲಕಂಪನಿಗಳು ಎಲ್ಪಿಜಿ (LPG) ಸಿಲಿಂಡರ್ಗಳ ವಿತರಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ತರಲು ಹೊರಟಿವೆ. ಗ್ರಾಹಕರೆ ನೀವಿದನ್ನು ತಿಳಿದುಕೊಳ್ಳದಿದ್ದರೆ ಮುಂದಿನ ಬಾರಿ ನಿಮಗೆ ಎಲ್ಪಿಜಿ ಸಿಲಿಂಡರ್ ಸಿಗುವುದು ಅನುಮಾನ..!

ಸಿಲಿಂಡರುಗಳ ವಿತರಣೆಯ ಸಮಯದಲ್ಲಿ ಕಳ್ಳತನ ತಪ್ಪಿಸಲು ಮತ್ತು ಸರಿಯಾದ ಗ್ರಾಹಕನಿಗೆ ತಲುಪುವಂತೆ ಮಾಡಲು ಸರಕಾರಿ ತೈಲ ಕಂಪನಿಗಳು ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಹೊರಟಿವೆ. ಸರಿಯಾದ ಗ್ರಾಹಕರನ್ನು ಪತ್ತೆ ಮಾಡಿ, ಡೆಲಿವರಿ ದೃಢೀಕರಣ ಪಡೆದುಕೊಳ್ಳಲು ವ್ಯವಸ್ಥೆ ರೂಪಿಸಲಾಗಿದೆ. ನವೆಂಬರ್ ಒಂದರಿಂದ ಗ್ರಾಹಕರು ಡೆಲಿವರಿ ಬಾಯಿಗೆ ಓಟಿಪಿ (OTP) ನೀಡಿದ ನಂತರವೇ ಸಿಲೆಂಡರ್ ದೊರೆಯಲಿದೆ.

ಇನ್ನು ಮುಂದೆ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಪಡೆದುಕೊಳ್ಳಲು ಕೇವಲ ಬುಕಿಂಗ್ ಮಾಡಿದರೆ ಸಾಲುವುದಿಲ್ಲ. ಬದಲಾಗಿ ಗ್ಯಾಸ್ ಬುಕಿಂಗ್ ನಂತರ ದೊರೆಯುವ ಒನ್ ಟೈಮ್ ಪಾಸ್ ವರ್ಡ್ ಅನ್ನು ಸಿಲೆಂಡರ್ ತಲುಪಿಸುವ ಡೆಲಿವರಿ ಬಾಯ್ ಗೆ ನೀಡಿದ ನಂತರವೇ  ನಿಮಗೆ ಸಿಲೆಂಡರ್ ದೊರೆಯಲಿದೆ. ಸದ್ಯ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಎರಡು ಮಹಾನಗರಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, ಹಂತ-ಹಂತವಾಗಿ ಜಾರಿಗೆ ಬರಲಿದೆ. ಈ ವ್ಯವಸ್ಥೆಯನ್ನು ನವೆಂಬರ್ ಒಂದರಿಂದ 100 ಸ್ಮಾರ್ಟ್ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತದೆ.

lpg-customers-will-have-to-adopt-this-process-from-november-1-otherwise-cylinder-will-not-be-available-01ಈ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಸರಿಯಾದ ಗ್ರಾಹಕನಿಗೆ ಸಿಲೆಂಡರ್ ತಲುಪಿಸಲು ತೈಲ ಕಂಪನಿಗಳಿಗೆ ಸಾಧ್ಯವಾಗುತ್ತದೆ. ಗ್ರಾಹಕರ ಹೆಸರಿನಲ್ಲಿ ಅನಿಲ ಕಳ್ಳತನವಾಗುವುದು ತಪ್ಪುತ್ತದೆ, ಆದರೆ ಗ್ರಾಹಕರು ತಮ್ಮ ದೂರವಾಣಿ ಸಂಖ್ಯೆಯನ್ನು ನವೀಕರಿಸಿದೆ ಇದ್ದಲ್ಲಿ ಸರಿಯಾದ ಗ್ರಾಹಕರು ಸಹ ಸಿಲೆಂಡರ್ ದೊರೆಯದೆ ತೊಂದರೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ತಕ್ಷಣವೇ ಗ್ರಾಹಕರು ತಮ್ಮ ಸಿಲೆಂಡರ್ ವಿತರಣಾ ಕಂಪನಿಗಳಲ್ಲಿ ದೂರವಾಣಿ ಸಂಖ್ಯೆಯನ್ನು ಚಾಲ್ತಿ ಗಳಿಸಿಕೊಳ್ಳಬೇಕು. ಇದರಿಂದ ಮುಂದಾಗುವ ಅವ್ಯವಸ್ಥೆಯನ್ನು ತಡೆಗಟ್ಟು ಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here