ಬೆಂಗಳೂರು: ರಾಜ್ಯದಲ್ಲಿ ಜೂನ್ 7 ರ ವರೆಗೆ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ. ಇದು ಕಳೆದ ನಂತರ ಮತ್ತೆ ಮುಂದುವರೆಯುವುದೇ ? ಅಥವಾ ಸಡಿಲಿಕೆಯ ವಿಧಾನಗಳನ್ನು ಅನುಸರಿಸಲಾಗುತ್ತದೆಯೇ ? ಎಂಬ ನಿಮ್ಮ ಹಲವಾರು ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಏನು ಹೇಳಿದ್ದಾರೆ ತಿಳಿಯೋಣ ಬನ್ನಿ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿಯವರು ಜೂನ್ 7 ರ ವರೆಗೆ ಕಠಿಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಅದರ ನಂತರ ವಿಸ್ತರಿಸಬೇಕೇ ಅಥವಾ ಬೇಡವೇ ಎನ್ನುವ ಕುರಿತು ಸಚಿವರ ಜೊತೆಯಲ್ಲಿ ಚರ್ಚಿಸಿ ಬಳಿಕ ಮುಖ್ಯಮಂತ್ರಿಗಳ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರವು ಜೂನ್ 30 ರ ವರೆಗೆ ಬಿಗಿ ಕ್ರಮಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ. ಇದನ್ನು ಯಾವರೀತಿಯಲ್ಲಿ ಜಾರಿಗೆ ತರಬೇಕು ಎನ್ನುವುದನ್ನು ಸಚಿವರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜೂನ್ 7 ರ ವರೆಗೆ ಕಠಿಣ ಲಾಕ್ ಡೌನ್ ನಿಯಮಗಳು ಮುಂದುವರಿಯಲಿದ್ದು, ಸ್ಥಿತಿಗಳಿ ನೋಡಿಕೊಂಡು ಲಾಕ್ ಡೌನ್ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಕೊರೋನಾ ಸೋಂಕು ಪ್ರಕರಣಗಳು ಇಳಿಕೆಯಾಗಿದ್ದು, ಲಾಕ್ ಡೌನ್ ವಿಸ್ತರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎನಿಸುತ್ತಿದೆ. ಆದರೆ ಇದಕ್ಕೆ ಜನರ ಸಹಕಾರ ಅಗತ್ಯ. ಕೊರೋನಾ ನಿಯಂತ್ರಣದ ಬಗ್ಗೆ ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಹೊಸದಾಗಿ ಬಂದಿದೆ ಕೊರೋನಾ ಔಷಧ ! ಇದರ ಬೆಲೆ ಕೇವಲ 990 ಮಾತ್ರ