ಬ್ರಿಟನ್: ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ತೆಗೆದುಕೊಂಡ ಅನೇಕ ಆರ್ಥಿಕ ನೀತಿಗಳಿಂದಾಗಿ ದೇಶದಲ್ಲಿ ಟೀಕೆಗೆ ಮತ್ತು ರಾಜಕೀಯ ಗೊಂದಲಗಳು ತೀವ್ರಗೊಳ್ಳುತ್ತಿದ್ದಂತೆ ಬ್ರಿಟನ್ ಪ್ರಧಾನಿ ಲೀಜ್ ಟ್ರಸ್ (Liz Truss) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಲೀಜ್ ಟ್ರಸ್ ಘೋಷಣೆ ಮಾಡಿದ ಆರ್ಥಿಕ ನೀತಿಗಳು ಮತ್ತು ಸರಕಾರ ತೆಗೆದುಕೊಂಡ ಹಲವು ತಪ್ಪು ನಿರ್ಧಾರಗಳಿಂದಾಗಿ ಭಾರಿ ಟೀಕೆ ಉಂಟಾಗಿತ್ತು. ಅಲ್ಲದೇ ಹಿರಿಯ ಸಚಿವೆಯೊಬ್ಬರು ತಮ್ಮ ಸ್ಥಾನವನ್ನು ತೊರೆದಿದ್ದರು. ಅಲ್ಲದೇ ಭಾರತೀಯ ಮೂಲದ ಗೃಹ ಕಾರ್ಯದರ್ಶಿ ಬ್ರಾವರ್ ಮನ್ ಸಹ ಸಚಿವ ಸ್ಥಾನವನ್ನು ತೊರೆದಿದ್ದರು.
ಮಾರುಕಟ್ಟೆಯಲ್ಲಿ ಉಂಟಾಗಿದ್ದ ತಲ್ಲಣಗಳನ್ನು ನಿಯಂತ್ರಿಸಲು ಲೀಜ್ ಟ್ರಸ್ ಸರಕಾರ ಸಾಲ-ಇಂಧನ ತೆರಿಗೆ ಕಡಿತ ಘೋಷಣೆ ಮಾಡಿತ್ತು. ಹೊಸದಾಗಿ ನೇಮಕವಾದ ಹಣಕಾಸು ಸಚಿವರು ತಕ್ಷಣ ಅವುಗಳನ್ನೆಲ್ಲಾ ವಾಪಸ್ ಪಡೆದು ಸರಕಾರಕ್ಕೆ ಮುಜುಗರ ಉಂಟುಮಾಡಿದರು. ಇದಲ್ಲದೇ ಪ್ರಧಾನಿಯ ವಿರುದ್ಧ ಉಂಟಾಗಿದ್ದ ಬಂಡಾಯಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿರಿ: ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಗೆ ಅಗ್ರ ಸ್ಥಾನ