lightning-strikes-while-people-taking-selfies-on-tower-in-jaipur-11-dead

ಜೈಪುರ: 12 ನೇಯ ಶತಮಾನದ ಅಮೆರ್ ಪ್ಯಾಲೇಸ್ ನ ವಾಚ್ ಟವರ್ ನಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದು 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ರಾಜಸ್ತಾನದ ಅಮೆರ್ ಪ್ಯಾಲೇಸ್ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರು ಮಳೆಯನ್ನೂ ಲೆಕ್ಕಿಸದೆ ವೀಕ್ಷಣಾ ಗೋಪುರದ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಇದೇ ಸಮಯಕ್ಕೆ ಗೋಪುರಕ್ಕೆ ಸಿಡಿಲು ಬಡಿದಿದೆ. ಕೆಲವರು ಸಿಡಿಲಿನ ಭಯಕ್ಕೆ ಗೋಪುರದಿಂದ ಜಿಗಿದಿದ್ದು, ಗಾಯಗಳಾದ ಘಟನೆ ಜೈಪುರದಲ್ಲಿ ನಡೆದಿದೆ.

 

ಸಿಡಿಲು ಬಡಿದ ಸಮಯದಲ್ಲಿ ಗೋಪುರದ ಮೇಲೆ 27 ಜನರು ಇದ್ದರೆಂದು ಹೇಳಲಾಗುತ್ತಿದೆ. ಈ ಕುರಿತಂತೆ ಪೊಲೀಸರು ಸಮಗ್ರ ತನಿಖೆಯನ್ನು ಕೈಗೊಂಡಿದ್ದಾರೆ. ಅಲ್ಲದೇ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳ ಕಾಲ ಬಹುತೇಕ ಕಡೆ ಭಾರೀ ಮಳೆಯ ನಿರೀಕ್ಷೆ

LEAVE A REPLY

Please enter your comment!
Please enter your name here