lawmakers-to-visit-kashmir-briefed-by-pm-modi-nsa-ajit-doval

ನವದೆಹಲಿ: 370ನೇ ವಿಧಿಯ ರದ್ಧತಿಯ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಉಂಟಾಗುತ್ತಿದೆ ಎಂದು ಪಾಕಿಸ್ತಾನ ಗುಲ್ಲೆಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಯೂರೋಪಿನ ಒಂದು ನಿಯೋಗ ಕಾಶ್ಮೀರಕ್ಕೆ ಬೇಟಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಸ್ಥಿತಿ-ಗತಿಯನ್ನು ಅಧ್ಯಯನ ಮಾಡುವ ಸಲುವಾಗಿ ಯೂರೋಪಿನ 27 ಸದಸ್ಯರ ತಂಡ ಭಾರತಕ್ಕೆ ಬೇಟಿ ನೀಡಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಬೇಟಿಯಾಗಿ ಸಮಾಲೋಚನೆ ನಡೆಸಿತ್ತು. ಈ ತಂಡವು ಕಾಶ್ಮೀರದ ಪರಿಸ್ಥಿತಿ ಮತ್ತು ಗಡಿಯಾಚೆಗಿನ ಬಯೋತ್ಪಾದಕ ದಾಳಿಗಳ ಕುರಿತಾಗಿ ಅಧ್ಯಯನ ಮಾಡಲಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ನಂತರ ಅಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಕುರಿತು ಪ್ರಪಂಚದ ಮುಂದೆ ತೆರೆದಿಡಲು ಭಾರತ ಸರಕಾರ ಅವಕಾಶ ನೀಡಿದೆ. ಆ ಮೂಲಕ ಪಾಕಿಸ್ತಾನ ಹೇಳಿಕೊಂಡು ತಿರುಗಾಡುತ್ತಿರುವ ಸಂಗತಿಗಳು ಸುಳ್ಳು ಎನ್ನುವುದನ್ನು ತೋರಿಸಿಕೊಡುವ ಉದ್ದೇಶ ಹೊಂದಿದೆ. ಇದರಿಂದಾಗಿ ಪಾಕಿಸ್ತಾನದ ಕುತಂತ್ರ ಬುದ್ದಿಯು ಜಗತ್ತಿನ ಮುಂದೆ ಪ್ರದರ್ಶನವಾಗುವುದಂತು ಸುಳ್ಳಲ್ಲ.

lawmakers-to-visit-kashmir-briefed-by-pm-modi-nsa-ajit-doval

ಜಮ್ಮು ಮತ್ತು ಕಾಶ್ಮೀರದಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಆ ಭಾಗದಲ್ಲಿ ಅವಶ್ಯವಿರುವ ಆಡಳಿತ ಮತ್ತು ಅಭಿವೃದ್ಧಿಯ ಅಗತ್ಯಗಳ ಕುರಿತಾಗಿಯೂ ಈ ವಿಶೇಷ ತಂಡಕ್ಕೆ ತಿಳಿಸಿಕೊಡಲಾಗುವುದು ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಇದನ್ನೂ ಓದಿರಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here