covid-19 updates

ಬೆಂಗಳೂರು (ಜೂನ್ 05): ರಾಜ್ಯದಲ್ಲಿಂದು ಒಂದೇ ದಿನ 515 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ಅತ್ಯಧಿಕ  204 ಪ್ರಖರಣಗಳು ಉಡುಪಿ ಜಿಲ್ಲೆಯೊಂದರಿಂದಲೇ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ ದಾಖಲಾದ ಅತ್ಯಧಿಕ ಸಂಖ್ಯೆ ಇದಾಗಿದೆ.

ಮೇ 15 ರ ವರೆಗೆ ಕೇವಲ 3 ಪ್ರಕರಣಗಳನ್ನು ಹೊಂದಿದ್ದ ಉಡುಪಿ ಜಿಲ್ಲೆ ಒಮ್ಮೆಲೆ ಅಂತರಾಜ್ಯ ಪ್ರಯಾಣಿಕರಿಂದಾಗಿ ರೆಡ್ ಝೋನ್ ಆಗಿ ಮಾರ್ಪಾಡಾಗಿದೆ. ಇಂದು ಒಂದೇ ದಿನಕ್ಕೆ ಜಿಲ್ಲೆಯಲ್ಲಿ 204 ಪಾಸಿಟಿವ್ ಪ್ರಖರಣಗಳು ದಾಖಲಾಗಿ ಆತಂಕವನ್ನು ಸೃಷ್ಟಿಸಿದೆ. ಈಗ 768 ಸೋಂಕಿತರ ಸಂಖ್ಯೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಕುಖ್ಯಾತಿಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರಲ್ಲಿ ಸುಮಾರು 90% ಮಹಾರಾಷ್ಟ್ರದ ನಂಟನ್ನು ಹೊಂದಿದವರೇ ಆಗಿದ್ದಾರೆ.

ಕೋವಿಡ್-19 ರ ಸೋಂಕಿನಿಂದ ಇಲ್ಲಿಯವರೆಗೆ ಒಟ್ಟು 57 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ವಿವಿಧ ಆಸ್ಪತ್ರೆಗಳಲ್ಲಿ ಗುಣಮುಖರಾಗಿ 1688 ಜನರು ಮನೆಗೆ ತೆರಳಿದ್ದಾರೆ.

ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಉಡುಪಿ 204, ಯಾದಗಿರಿ 74, ವಿಜಯಪುರ 53, ಕಲಬುರಗಿ 42,  ಮಂಡ್ಯ 13, ಬೀದರ್ 39, ಬೆಳಗಾವಿ 36, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 10, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಚಿಕ್ಕಬಳ್ಳಾಪುರ 3, ಹಾಸನ 3, ಧಾರವಾಡ 3, ರಾಮನಗರ 2, ಹಾವೇರಿ 2, ಬಾಗಲಕೋಟೆ 1,  ದಾವಣಗೆರೆ 1, ಕೋಲಾರ 1, ಬಳ್ಳಾರಿ 1,  ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿರಿ: ರಾಹುಲ್ ಗಾಂಧಿ ಮತ್ತು ಅವರ ಪರಿವಾರ ಭಾರತವನ್ನು ಇಟಲಿಯಂತೆ ಮಾಡಲು ಹೊರಟಿದೆ-ಯೋಗಿ ಆದಿತ್ಯನಾಥ್

LEAVE A REPLY

Please enter your comment!
Please enter your name here