ಬೆಂಗಳೂರು: ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈಗೆ ಇಳಿಯುವ ಚಂದ್ರಯಾನ್ -2 ರ ‘ವಿಕ್ರಮ್’ ಲ್ಯಾಂಡರ್ ಅನ್ನು ಕಕ್ಷೆಯಿಂದ ಇಸ್ರೋ ಯಶಸ್ವಿಯಾಗಿ ಬೇರ್ಪಡಿಸಿತು. ಇಂದು ಮಧ್ಯಾಹ್ನ 12.45 ಕ್ಕೆ ಕಕ್ಷೆಯಿಂದ ಬೇರ್ಪಡಿಸುವ ಪ್ರಕ್ರಿಯೆ ಪ್ರಾರಂಭಿಸಿ, ಮಧ್ಯಾಹ್ನ 1.15 ಕ್ಕೆ ‘ವಿಕ್ರಮ್’ ಕಕ್ಷೆಯಿಂದ ಬೇರ್ಪಟ್ಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಲ್ಯಾಂಡರ್ ‘ವಿಕ್ರಮ್’ ಸೆಪ್ಟೆಂಬರ್ 7 ರಂದು ಸಂಜೆ 7:55 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ‘ಸಾಫ್ಟ್ ಲ್ಯಾಂಡಿಂಗ್’ ಮಾಡಲಿದೆ. ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿದ ನಂತರ, ‘ಪ್ರಜ್ಞಾನ್’ ಎಂಬ ರೋವರ್ ಅದರೊಳಗಿನಿಂದ ಹೊರಬರುತ್ತದೆ ಮತ್ತು ಅದರ ಆರು ಚಕ್ರಗಳಲ್ಲಿ ನಡೆಯುವ ಮೂಲಕ ಚಂದ್ರನ ಮೇಲ್ಮೈಯಲ್ಲಿ ತನ್ನ ವೈಜ್ಞಾನಿಕ ಪ್ರಯೋಗಗಳನ್ನು ಮಾಡುತ್ತದೆ.
ಇದನ್ನೂ ಓದಿರಿ: ಭಾರತೀಯ ಸೇನಾಪಡೆಗೆ ಅತ್ಯಾಧುನಿಕ 8 ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ
ಚಂದ್ರನ ಮೇಲೆ ‘ಸಾಫ್ಟ್ ಲ್ಯಾಂಡಿಂಗ್’ ಮಾಡುವುದು ಚಂದ್ರಯಾನ ಮಿಷನ್-2 ರ ಅತ್ಯಂತ ಸಂಕೀರ್ಣ ಹಂತವಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳುತ್ತಾರೆ. ಎಲ್ಲವೂ ಸರಿಯಾಗಿ ನಡೆದರೆ, ಅಮೆರಿಕ, ರಷ್ಯಾ ಮತ್ತು ಚೀನಾ ನಂತರ, ಚಂದ್ರನ ಮೇಲೆ ‘ಸಾಫ್ಟ್ ಲ್ಯಾಂಡಿಂಗ್’ ಮಾಡುವ ವಿಶ್ವದ ನಾಲ್ಕನೇ ದೇಶವಾಗಲಿದೆ. ಇದರೊಂದಿಗೆ ಬಾಹ್ಯಾಕಾಶ ಇತಿಹಾಸದಲ್ಲಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಭಾರತದ ಬಾಹ್ಯಾಕಾಶ ಯಾನದ ತಂದೆ ವಿಕ್ರಮ್ ಸರಭಾಯ್ ಅವರ ಹೆಸರಿನಿಂದ ಲ್ಯಾಂಡರ್ಗೆ ‘ವಿಕ್ರಮ್‘ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿರಿ: ಇಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ
SPONSORED CONTENT