ಕಳೆದ ಕೆಲವು ದಿನಗಳಿಂದ ಲಡಾಖ್ ಗಡಿಪ್ರದೇಶದಲ್ಲಿ ಚೀನಾ ಜೊತೆಗಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಮತ್ತು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಮೋದಿಯವರು ಚರ್ಚೆಯನ್ನು ನಡೆಸಿದರು. ಇದಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಪಿನ್ ರಾವತ್ ಮತ್ತು ಮೂರೂ ಸೇನಾ ಮುಖ್ಯಸ್ಥರೊಂದಿಗೆ ಸಭೆಯನ್ನು ನಡೆಸಿ ಲಡಾಖ್ ಗಡಿಪ್ರದೇಶದ ಭದ್ರತೆಯ ಕುರಿತು ಮಾಹಿತಿಯನ್ನು ಪಡೆದಿದ್ದರು.
ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ, ಅಜಿತ್ ದೋವಲ್, ಬಿಪಿನ್ ರಾವತ್ ಮತ್ತು ಮೂರೂ ಸೇನಾ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಚೀನಾ ಗಡಿಯಲ್ಲಿನ ಉದ್ವಿಗ್ನತೆ ಮತ್ತು ಈ ನಿಟ್ಟಿನಲ್ಲಿ ಸೈನ್ಯದ ನಿಲುವುಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಇನ್ನು ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಸೇನಾ ಕಮಾಂಡರ್ ಗಳ ಸಮಾವೇಶದಲ್ಲಿ ಈ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆ ಲೇಹ್ ಗೆ ಬೇಟಿನೀಡಿದ್ದ ಮನೋಜ್ ಕುಂಜನ್ ಅವರು ಪ್ರಸ್ತುತ ಗಡಿ ನಿಯಂತ್ರಣ ರೆಖೆಯುದ್ಧಕ್ಕೂ ಇರುವ ಪರಿಸ್ಥಿತಿಗಳ ಕುರಿತು ವಿವರವಾಗಿ ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಸೇನೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಮೇ 5 ಮತ್ತು 6 ರಂದು ಪೆಂಗಾಂಗ್ ಸರೋವರದ ಬಳಿಯಲ್ಲಿ ನಡೆದ ಉಭಯ ಸೇನಾ ಪಡೆಗಳ ನಡುವೆ ನಡೆದ ಸಣ್ಣ ಪುಟ್ಟ ಘಟನೆಗಳ ನಂತರ ಸುಮಾರು ಐದು ಹಿರಿಯ ಮಿಲಿಟರಿ ಅಧಿಕಾರಿಗಳ ಸಭೆಗಳು ನಡೆದಿದ್ದು, ಆದರೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದಿಲ್ಲ ಎನ್ನುವುದನ್ನು ಇಲ್ಲಿ ಗಮಸಬೇಕಿದೆ.