ನವದೆಹಲಿ: ನರೇಂದ್ರ ಮೋದಿ ಸರಕಾರ ಮೊದಲಿಂದಲೂ ಏನಾದರೊಂದು ಬಡವರಿಗಾಗಿ ಮೊದಲಿನಿಂದಲೂ ಏನಾದರೊಂದು ಹೊಸ ಕಾನೂನನ್ನು ಜಾರಿಗೆ ತರುವ ಮೂಲಕ ಸಹಾಯಹಸ್ತವನ್ನು ಚಾಚುತ್ತದೆ. ಬ್ಯಾಂಕ್ ಮೆಟ್ಟಿಲನ್ನು ಹತ್ತದೇ ಇರುವವರಿಗಾಗಿ ಜನಧನ ಖಾತೆಗಳ ಮೂಲಕ ಉಳಿತಾಯ ಖಾತೆಗಳನ್ನು ನೀಡಿದರು. ಇನ್ನು ಹಳ್ಳಿಗಳಲ್ಲಿ ಅನೇಕ ತಾಯಂದಿರು ಅಡುಗೆಯ ಸಮಯದಲ್ಲಿ ಪಾಡು ಪಡುತ್ತಿದ್ದದ್ದನ್ನು ಮನಗಂಡು ಉಜ್ವಲ ಯೋಜನೆಯನ್ನು ಜಾರಿಗೆ ತಂದರು. ಇದೇ ರೀತಿಯಲ್ಲಿ ಇಂದು ಖಾಸಗಿ ವಲಯದ ಖಾರ್ಮಿಕರಾಗಿ ದುಡಿಯುತ್ತಿರುವ ತಿಂಗಳಿಗೆ 15,000 ಕ್ಕಿಂತ ಕಡಿಮೆ ಸಂಬಳ ಪಡೆಯುವವರಿಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.
ನೀವು ಖಾಸಗಿ ವಲಯದಲ್ಲಿ ಕೆಲಸವನ್ನು ಮಾಡುತ್ತಿದ್ದು, ನೀವು 15 ಸಾವಿರಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದರೆ ನಿಮಗೆ ಈ ಸುದ್ದಿಯು ಸಿಹಿಯನ್ನು ನೀಡುತ್ತದೆ. ನಿಮಗೆ ಸಹಾಯ ಮಾಡಲೆಂದೇ ಈ ನೂತನ ನಿಯಮ ಜಾರಿಗೆ ತರಲಾಗಿದ್ದು, ಇಂದೇ ಇ-ಲೇಬರ್ ಪೋರ್ಟಲ್ ನಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ನೋಂದಾವಣೆಯಾದ ನಂತರ ಯಾವುದೇ ಖಾಸಗಿ ವಲಯದ ಅರ್ಹ ಖಾರ್ಮಿಕ ಅಪಘಾತಕ್ಕೆ ಒಳಗಾದರೆ ಅಥವಾ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಎರಡು ಲಕ್ಷಗಳ ವಿಮೆಗೆ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ.
ಈ ಯೋಜನೆಯಲ್ಲಿ ಅಸಂಘಟಿಯ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ರಿಕ್ಷಾ ಎಳೆಯುವವರು, ಮಹಾತ್ಮಾ ಗಾಂಧಿ ನರೇಗಾ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿದಂತೆ ಖಾಸಗಿ ವಲಯದ 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಎಲ್ಲರೂ ಅರ್ಹರಾಗಿರುತ್ತಾರೆ. ಇವರು ಯಾವುದೇ ತುರ್ತು ಸಮಯದಲ್ಲಿ www.eshram.gov.in ಪೋರ್ಟಲ್ ಗೆ ತೆರಳಿ ದೂರನ್ನು ದಾಖಲಿಸಬಹುದು ಅಥವಾ 14434 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.
ಸರಕಾರದ ಈ ಯೋಜನೆಯಲ್ಲಿ ಭಾಗಿಯಾಗಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ನೇರವಾಗಿ www..eshram.gov.in ವೆಬ್ ಪೋರ್ಟಲ್ ಗೆ ತೆರಳಿ, ಆಧಾರ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ ರಿಜಿಸ್ಟರ್ ಆಗಬಹುದಾಗಿದೆ. ಆಧಾರ್ ಗ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಹೊಂದಿಲ್ಲದ ಸಮಯದಲ್ಲಿ ಬಯೋಮೆಟ್ರಿಕ್ ಪ್ರಮಾನೀಕರಣದ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಾದ ಬಳಿಕ ನಿಮ್ಮ ಇ-ಲೇಬರ್ ಕಾರ್ಡನ್ನು ಮುದ್ರಿಸಿಕೊಂಡು ಪಡೆದುಕೊಳ್ಳಬಹುದಾಗಿದೆ.
All registered Unorganised Workers will be provided the Accidental Insurance Coverage through PMSBY for a year.
It will also be helpful for State & Central Governments to provide assistance to eligible UWs in case of any pandemic/ calamities.#ShramevJayate pic.twitter.com/5YUT9njRYA
— PIB India (@PIB_India) August 26, 2021
ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾವಣೆಯಾದ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (PMSYM), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.