kusuma-trailing-behind-in-rr-nagar

ಬೆಂಗಳೂರು: ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣಾ ಮತ ಎಣಿಕೆ ಕಾರ್ಯ ಇಂದು 8 ಗಂಟೆಯಿಂದಲೇ ಪ್ರಾರಂಭವಾಗಿದ್ದು, ಎರಡೂ  ಕ್ಷೇತ್ರದಲ್ಲಿಯೂ ಮೊದಲಿನಿಂದಲೂ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡು ಬರುತ್ತಿದೆ. ಸದ್ಯ ರಾಜರಾಜೇಶ್ವರಿ ನಗರದಲ್ಲಿ ಮೂರನೇ ಹಂತದ ಮತ ಎಣಿಕೆ ಕಾರ್ಯವು ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಹಿನ್ನಡೆಯಾಗಿದೆ.

ಬೆಳಗ್ಗಿನಿಂದ ಪ್ರಾರಂಭವಾದ ಮತ ಎಣಿಕೆ ಕಾರ್ಯದಲ್ಲಿ ಇಲ್ಲಿಯವರೆಗೆ ಮೂರೂ ಸುತ್ತಿನ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಇಲ್ಲಿಯವರೆಗೆ ಬಿಜೆಪಿ 15,110 ಮತ್ತು ಕಾಂಗ್ರೆಸ್ 8692 ಮತಗಳನ್ನು ಪಡೆದುಕೊಂಡಿವೆ. ಇದಲ್ಲದೇ  ಜೆಡಿಎಸ್ ಸಹ ಸ್ಪರ್ದಿಸಿದ್ದು, 784 ಮತಗಳನ್ನು ಪಡೆಯಲು ಸಾಧ್ಯವಾಗಿದೆ.

ಇದನ್ನೂ ಓದಿರಿ: ಆರ್ ಆರ್ ನಗರ ಉಪಚುನಾವಣಾ ಫಲಿತಾಂಶ 5 ನೇ ಸುತ್ತಿನ ಮತ ಎಣಿಕೆಯಲ್ಲಿಯೂ ಮುನಿರತ್ನಗೆ ಮುನ್ನಡೆ

LEAVE A REPLY

Please enter your comment!
Please enter your name here