KSRTC ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್: ಡಿಸೆಂಬರ್ 10 ರಿಂದಲೇ ನೂತನ ದರ ಅನ್ವಯ !

ksrtc-hikes-luggage-fares-by-10-percent

ಬೆಂಗಳೂರು: ಸಾಮಾನ್ಯ ಜನರಿಗೆ ಒಂದಾದ ನಂತರ ಒಂದರ ಬೆಲೆ ಏರಿಕೆ ಹೊಡೆತ ಬೀಳುತ್ತಿದೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಬಸ್ ಗಳಲ್ಲಿ ಲಗೇಜ್ ದರ ಹೆಚ್ಚಳ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತೀರ್ಮಾನ ಮಾಡಿದೆ.

ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ಏರುತ್ತಲೇ ಸಾಗಿದೆ. ನಿನ್ನೆ ಆಟೋರಿಕ್ಷಾ ಬೆಲೆಯಲ್ಲಿ ಹೆಚ್ಚಳ ಕಂಡಿದ್ದು, ಇದೀಗ KSRTC ಲಗೇಜುಗಳ ದರವನ್ನು ಏರಿಕೆ ಮಾಡಲಿದೆ. ಈ ಹೊಸ ನಿಯಮ ಡಿಸೆಂಬರ್ 10 ರಿಂದಲೇ ಜಾರಿಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ನಷ್ಟದ ನೆಪವೊಡ್ಡಿ ಬಸ್ ಗಳಲ್ಲಿ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ನಿಗದಿಪಡಿಸಲಾಗಿದೆ. ಈ ದರ ಏರಿಕೆ ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ. ಶೇ 10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ.

KSRTC ವಿಧಿಸುತ್ತಿದ್ದ ಹಿಂದಿನ ಲಗೇಜು ದರ ಮತ್ತು ಪರಿಷ್ಕೃತ ನೂತನ ದರ ಪಟ್ಟಿ ಈ ರೀತಿಯಿದೆ..

1 ರಿಂದ 5 ನೇ ಸ್ಟೇಜ್ – ಹಿಂದಿನ ದರ ರೂ.5, ಈಗಿನ ದರ ರೂ.5

6 ರಿಂದ 10ನೇ ಸ್ಟೇಜ್ – ಹಿಂದಿನ ದರ ರೂ.10, ನೂತನ ದರ ರೂ.10

11 ರಿಂದ 15ನೇ ಸ್ಟೇಜ್ – ಹಿಂದಿನ ದರ ರೂ.15, ನೂತನ ದರ ರೂ.17

16 ರಿಂದ 20ನೇ ಸ್ಟೇಜ್ – ಹಿಂದಿನ ದರ ರೂ.18, ನೂತನ ದರ ರೂ.21

21 ರಿಂದ 25ನೇ ಸ್ಟೇಜ್ – ಹಿಂದಿನ ದರ ರೂ.21, ನೂತನ ದರ ರೂ.24

26 ರಿಂದ 30ನೇ ಸ್ಟೇಜ್ – ಹಿಂದಿನ ದರ ರೂ.25, ನೂತನ ದರ ರೂ.28

31 ರಿಂದ 35ನೇ ಸ್ಟೇಜ್ – ಹಿಂದಿನ ದರ ರೂ.29, ನೂತನ ದರ ರೂ.32

36 ರಿಂದ 40ನೇ ಸ್ಟೇಜ್ – ಹಿಂದಿನ ದರ ರೂ.33, ನೂತನ ದರ ರೂ.36

41 ರಿಂದ 45ನೇ ಸ್ಟೇಜ್ – ಹಿಂದಿನ ದರ ರೂ.36, ನೂತನ ದರ ರೂ.39

46 ರಿಂದ 50ನೇ ಸ್ಟೇಜ್ – ಹಿಂದಿನ ದರ ರೂ.40, ನೂತನ ದರ ರೂ.43

51 ರಿಂದ 55ನೇ ಸ್ಟೇಜ್ – ಹಿಂದಿನ ದರ ರೂ.44, ನೂತನ ದರ ರೂ.47

56 ರಿಂದ 60ನೇ ಸ್ಟೇಜ್ – ಹಿಂದಿನ ದರ ರೂ.48, ನೂತನ ದರ ರೂ.51

61 ರಿಂದ 65ನೇ ಸ್ಟೇಜ್ – ಹಿಂದಿನ ದರ ರೂ.51, ನೂತನ ದರ ರೂ.54

66 ರಿಂದ 70ನೇ ಸ್ಟೇಜ್ – ಹಿಂದಿನ ದರ ರೂ.55, ನೂತನ ದರ ರೂ.58

156 -160ನೇ ಸ್ಟೇಜ್ – ಹಿಂದಿನ ದರ ರೂ.123 ,ರಿಂದ 126 ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here