ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಲನ ಚಿತ್ರ ಇಂದು ತೆರೆಗೆ ಅಪ್ಪಳಿಸಿದೆ. ನಿನ್ನೆಯೇ ತೆರೆಕಾಣಬೇಕಿದ್ದ ಸಿನೆಮಾ ತಾಂತ್ರಿಕ ದೋಷದಿಂದಾಗಿ ಮುಂದೂಡಲ್ಪಟ್ಟಿತ್ತು. ಅಂತೂ ಇಂತೂ ಇಂದು ಬಿಡುಗಡೆ ಕಾಣುವ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆದಿದೆ.
ಚಿತ್ರಮಂದಿರಗಳ ಎದುರು ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ಹೂವಿನ ಹಾರಗಳಿಂದ ಶೃಂಗರಿಸಲಾಗಿದೆ. ಅಲ್ಲದೇ ಅಭಿಮಾನಿಗಳಿಂದ ಹಾಲಿನ ಅಭಿಷೇಕಗಳು ಸಹ ನಡೆಯುತ್ತಿವೆ. ವಿತರಕರನ್ನು ಬದಲಾಯಿಸಿ ಇಂದು ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಸುದೀಪ್ ಟ್ವಿಟ್ ಮಾಡಿದ್ದರೂ ಕೆಲ ಚಿತ್ರಮಂದಿರಗಳಲ್ಲಿ ಸಮಸ್ಯೆ ಹಾಗೆಯೇ ಮುಂದುವರೆದಿತ್ತು. ಬೆಳಗ್ಗೆ ಆಯೋಜನೆಯಾಗಿದ್ದ ಫ್ಯಾನ್ಸ್ ಷೋ ರದ್ದಾಗಿರುವ ಕುರಿತು ಕೆಲ ಚಿತ್ರಮಂದಿರಗಳಲ್ಲಿ ಬೋರ್ಡ್ ಹಾಕಿರುವುದು ಕಂಡುಬಂದಿತ್ತು.
ಇನ್ನುಳಿದಂತೆ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಆರಂಭಿಸಿರುವ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರ ಬಹು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. ಚಿತ್ರದ ಕುರಿತು ಹೆಚ್ಚಿನ ನಿರೀಕ್ಷೆಯಿದ್ದು, ಪ್ರೇಕ್ಷಕನ ನಿರೀಕ್ಷೆಯನ್ನು ತಣಿಸಲಿದೆಯೇ ಕಾಡು ನೋಡಬೇಕಿದೆ.
ಇದನ್ನೂ ಓದಿರಿ: “ಶಮೀವೃಕ್ಷ”ವನ್ನು ಅದೇಕೆ ವಿಜಯ ದಶಮಿಯ ದಿನ ಪೂಜೆ ಮಾಡುತ್ತಾರೆ ? ಅದರ ಹಿಂದಿನ ರಹಸ್ಯ ತಿಳಿಯಿರಿ