Kodagu-national-disaster-response-fund

ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾದ ಕೊಡಗಿನ ಪುನರ್ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ನಿಧಿಯಿಂದ 546.21 ಕೋಟಿ ರೂ.ಗಳ ನೆರವು ನೀಡಲು ಉನ್ನತ ಮಟ್ಟದ ಸಮೀತಿ ಒಪ್ಪಿಗೆ ನೀಡಿದೆ.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೇತ್ರತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ಈ ಹಣದ ನೆರವನ್ನು ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಭಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಕೆಲವರು ಜಮೀನು, ಮನೆ ಕಳೆದುಕೊಂಡಿದ್ದರು. ಹಲವಾರು ಗುಡ್ಡಗಳು ಕುಸಿತಕ್ಕೆ ಒಳಗಾಗಿದ್ದವು. ರಸ್ತೆಗಳು ಮತ್ತು ವಿದ್ಯುತ್ ಕಂಬಗಳು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಮಳೆಗೆ ಕೊಚಿಕೊಂಡು ಹೋಗಿದ್ದವು. ಜಿಲ್ಲೆಯಾದ್ಯಂತ ಸುಮಾರು 67 ಜನರು ಸಾವಿಗೀಡಾಗಿರುವುದು ದಾಕಲಾಗಿತ್ತು.

ಕೊಡಗಿನ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಕೇಂದ್ರಕ್ಕೆ 1,199 ಕೋಟಿ ರೂಪಾಯಿಗಳ ನೆರವನ್ನು ಕೇಳಿತ್ತು. ಆದರೆ ಎರಡನೆಯ ಹಂತದಲ್ಲಿ ಕೇಂದ್ರ 546.21 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡುವ ಮೂಲಕ ಪುನರ್ ನಿರ್ಮಾಣಕ್ಕೆ ಸಹಕಾರ ನೀಡಿದೆ. ಈ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್  ಟ್ವೀಟ್ ಮಾಡಿದ್ದು, ಕೊಡಗಿನ ಜನತೆಗೆ ಸ್ವಲ್ಪ ಮಟ್ಟಿನ ಕುಷಿ ನೀಡಿದಂತಾಗಿದೆ.

Image Copyright : google.com

LEAVE A REPLY

Please enter your comment!
Please enter your name here