know-everything-about-atal-tunnel-border-roads-organisation-rohtang-pass-manali-leh

ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್ ನ್ನು ತಲುಪಲು ನಿರ್ಮಾಣವಾಗಿರುವ ಸುರಂಗ ಮಾರ್ಗವೇ ‘ಅಟಲ್ ಸುರಂಗ’ಮಾರ್ಗ. ಇದು ಸಮುದ್ರ ಮಟ್ಟದಿಂದ 10,000 ಅಡಿಗಳಷ್ಟು ಎತ್ತರದಲ್ಲಿ ನಿರ್ಮಾಣವಾಗಿದೆ. ರಸ್ತೆಯ ನಿರ್ಮಾಣದಿಂದಾಗಿ ವರ್ಷದ 12 ತಿಂಗಳು ಗಡಿ ಪ್ರದೇಶಗಳಿಗೆ ಸಂಚಾರವನ್ನು ಕಲ್ಪಿಸಲು ನೆರವಾಗುತ್ತದೆ.

ಮನಾಲಿಯಿಂದ ಲೇಹ್ ತಲುಪುವ ಒಟ್ಟು 46 ಕಿಲೋ ಮೀಟರ್ ರಸ್ತೆಯು ಕೇವಲ ಆರು ತಿಂಗಳುಗಳು ಮಾತ್ರ ಸಂಚಾರಕ್ಕೆ ಯೋಗ್ಯವಾಗಿರುತ್ತದೆ. ಇನ್ನುಳಿದ ಸಮಯದಲ್ಲಿ ಹಿಮಚ್ಛಾದಿತವಾಗಿ ತನ್ನ ಸಂಪರ್ಕವನ್ನು ಕಳೆದುಕೊಳ್ಳುತ್ತಿತ್ತು. ಇದರಿಂದಾಗಿ ಅಲ್ಲಿನ ಜನಜೀವನ ಮತ್ತು ಗಡಿಪ್ರದೇಶದಲ್ಲಿ ಸೇನೆಯ ಭದ್ರತೆಗೆ ತೊಡಕಾಗುತ್ತಿತ್ತು. ಇದನ್ನು ಅರಿತ ಭಾರತ ಸರಕಾರ ಈ ಸುರಂಗ ಮಾರ್ಗಮಾರ್ಗದ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಿತು. ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು 2000 ನೇ ಇಸ್ವಿಯಲ್ಲಿ ಸುರಂಗ ನಿರ್ಮಾಣ ಕಾರ್ಯವನ್ನು ಘೋಷಣೆ ಮಾಡಿ, ಶಂಕುಸ್ಥಾಪನೆ ನೆರವೇರಿಸಿದರು.

ಈ ಸುರಂಗ ಮಾರ್ಗದ ಶಂಕುಸ್ಥಾಪನೆ ಆದರೂ ಸಹ ಇದರ ಟೆಂಡರ್ 2009 ಸೆಪ್ಟೆಂಬರ್ 24 ರಂದು ಆಯಿತು. ಆ ನಂತರದಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್ ನೇತೃತ್ವದಲ್ಲಿ ಸುರಂಗ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಆದರೆ ಕಡಿದಾದ ಬಂಡೆಗಳು, ಅತಿಯಾದ ಹಿಮಪಾತ, ಭೂಕಂಪ ಇಂತಹ ಹಲವಾರು ಸಮಸ್ಯೆಗಳಿಂದಾಗಿ ಆರು ವರ್ಷಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಹತ್ತು ವರ್ಷಗಳ ಸಮಯವನ್ನು ತೆಗೆದುಕೊಂಡಿತು. ಭೌಗೋಳಿಕವಾಗಿ ಸಮಸ್ಯೆಗಳಿಂದ ಮತ್ತು ಅನೇಕ ವರ್ಷಗಳ ಕಾಲ ನಿರ್ಮಾಣ ಕಾರ್ಯ ನಡೆದಿದ್ದರಿಂದ ಯೋಜನೆ ಮೊದಲು ಹೊಂದಿದ್ದ ಮೊತ್ತ 1,458 ಕೋಟಿ ರೂಪಾಯಿಗಳಿಂದ 2500 ಕೋಟಿಗಳಷ್ಟು ಹೆಚ್ಚುವರಿ ವೆಚ್ಚಕ್ಕೆ ಕಾರಣವಾಯಿತು. ಸದ್ಯ ಈ ಸುರಂಗ ಮಾರ್ಗದ ಕಾರ್ಯ ಸಂಪೂರ್ಣ ಮುಗಿದಿದ್ದು, ಅಕ್ಟೋಬರ್ 3 ರಂದು ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದಾರೆ.

know-everything-about-atal-tunnel-border-roads-organisation-rohtang-pass-manali-leh-01

ಈ ಸುರಂಗ ಮಾರ್ಗದ ವಿಶೇಷತೆಗಳೇನು ?

  • ಈ ಸುರಂಗ ಮಾರ್ಗವು ಸಮುದ್ರ ಮಟ್ಟದಿಂದ 10,000 ಅಡಿಗಳಷ್ಟು ಎತ್ತರದಲ್ಲಿ ನಿರ್ಮಾಣವಾಗಿದ್ದು, 8.8 ಕಿಲೋ ಮೀಟರ್ ಉದ್ದದ ಈ ಸುರಂಗ ಮಾರ್ಗ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ ಎಂಬ ಖ್ಯಾತಿಗೆ ಪಾತ್ರವಾಗಿದೆ.
  • ಈ ಸುರಂಗ ಮಾರ್ಗವೂ ಲಾಹೌಲ್ ಕಣಿವೆಗಳಲ್ಲಿ ನಿರ್ಮಾಣವಾಗಿದ್ದು, ರೊಹ್ಟಾಂಗ್ ಪಾಸ್,  ಸರ್ಚ್- ಲೇಹ್ ರಸ್ತೆಯ 46 ಕಿಲೋ ಮೀಟರ್ ಕ್ರಮಿಸುವ ದೂರವನ್ನು ಕಡಿಮೆಮಾಡುತ್ತದೆ.
  • ಈ ಸುರಂಗವು 10.5 ಮೀಟರ್ ಅಗಲವಾಗಿದ್ದು, ದ್ವಿಮುಖ ಸಂಚಾರಕ್ಕೆ ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಇದಲ್ಲದೆ ಈ ರಸ್ತೆ ನಿರ್ಮಾಣದಿಂದಾಗಿ ವರ್ಷದ 12 ತಿಂಗಳು ಹಿಮಾಚಲ ಪ್ರದೇಶದ ಸಂಪರ್ಕಕ್ಕೆ ಸಹಕಾರಿಯಾಗುತ್ತದೆ.
  • ಈ ಸುರಂಗ ಮಾರ್ಗದಲ್ಲಿ ಅಗ್ನಿ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಬೆಂಕಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೆ ಸುರಕ್ಷತೆಗಾಗಿ ಪ್ರತಿ 60 ಮೀಟರ್ ಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ತುರ್ತು ಸಮಯಗಳಲ್ಲಿ ಅಗತ್ಯಕ್ಕೆ ಪ್ರತಿ 500 ಮೀಟರ್ ಗಳಿಗೆ ತುರ್ತು ನಿರ್ಗಮನ ಸುರಂಗಗಳನ್ನು ನಿರ್ಮಿಸಲಾಗಿದೆ.
  • ಈ ಸುರಂಗ ಮಾರ್ಗಗಳಿಂದಾಗಿ ಕೇದಾರನಾಥ, ಬದರೀನಾಥ ದೇವಾಲಯಗಳಿಗೆ ಎಲ್ಲ ಸಮಯದಲ್ಲಿಯೂ ಸಂಪರ್ಕಿಸಬಹುದಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ನಮ್ಮ ಸೇನೆಗೆ ಅಗತ್ಯ ಸಂಪರ್ಕಗಳಿಗೆ ತುಂಬಾನೇ ಸಹಕಾರಿಯಾಗಲಿದೆ.
  • ಈ ಸುರಂಗವು ಯಾವುದೇ ಹವಾಮಾನದ ಪರಿಸ್ಥಿತಿಯಲ್ಲಿಯೂ ಪ್ರತಿದಿನ 3000 ವಾಹನಗಳು ಮುಕ್ತವಾಗಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಗಂಟೆಗೆ ವೇಗದ ಮಿತಿ 80 ಕಿಲೋ ಮೀಟರ್ ನಲ್ಲಿ ಸಂಚಾರಕ್ಕೆ ಸಹಕಾರಿಯಾಗಿದೆ. ಈ ಮಾರ್ಗಕ್ಕೆ ವಾಜಪೇಯಿ ಅವರ 95 ನೇ ಜನ್ಮದಿನದ ನೆನಪಿಗಾಗಿ ನರೇಂದ್ರ ಮೋದಿಯವರು 2019 ರಲ್ಲಿ ‘ಅಟಲ್ ಸುರಂಗ‘ ಎಂದು ನಾಮಕರಣ ಮಾಡಿದ್ದಾರೆ.

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಸುರಂಗ ಮಾರ್ಗ ಅಕ್ಟೋಬರ್ 3 ರಂದು ಲೋಕಾರ್ಪಣೆಯಾಗುತ್ತಿರುವುದು ದೇಶದ ದೃಷ್ಟಿಯಿಂದ ಒಂದು ಮೈಲುಗಲ್ಲಾಗಿದೆ. ಈ ಸುರಂಗದಿಂದಾಗಿ ಭದ್ರತಾ ಪಡೆಗಳು ದೇಶದ ರಕ್ಷಣೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಲು ಸಹಾಯಕವಾಗಲಿದೆ.

LEAVE A REPLY

Please enter your comment!
Please enter your name here