ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧ ವ್ಯಕ್ತಿಗಳ ನಡೆ, ನುಡಿ, ಅವರ ಜೀವನಶೈಲಿ ಹೀಗೆ ಹಲವಾರು ವಿಷಯಗಳ ಕುರಿತು ಟ್ರೋಲ್ ಮಾಡುವುದು ನಡೆದೇ ಇರುತ್ತದೆ. ಅದೇ ರೀತಿಯಲ್ಲಿ ಹಲವಾರು ಸುದ್ದಿ ವಾಹಿನಿಗಳ ನಿರೂಪಕರ ಟ್ರೋಲ್ ವಿಡಿಯೋಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಅವೆಲ್ಲವುಗಳಂತೆ ಈಗ ಕಿರಿಕ್ ಕೀರ್ತಿ ಅವರ ನಿರೂಪಣೆಯು ಟ್ರೋಲ್ ಆಗುತ್ತಿದೆ.
ಕನ್ನಡ ಬಿಗ್ ಬಾಸ್ ಖ್ಯಾತಿಯ ಹಾಗೂ ಕಿರಿಕ್ ಕೀರ್ತಿ ಎಂದೇ ಪ್ರಸಿದ್ಧವಾಗಿರುವ ಇವರು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನ್ನು ಟ್ರೋಲ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಸ್ವತಃ ತಾವೇ ತಮ್ಮ ಫೆಸ್ ಬುಕ್ ವಾಲ್ ನಲ್ಲಿ ಶೇರ್ ಮಾಡುವ ಮೂಲಕ ನನಗೆ ನಿಮ್ಮ ಕ್ರಿಯೇಟಿವಿಟಿ ತುಂಬಾ ಇಷ್ಟವಾಯಿತು ಎಂದಿದ್ದಾರೆ.
ಇದನ್ನೂ ಓದಿರಿ: ನಟ ವಿಜಯ ರಾಘವೇಂದ್ರ ಕಾರ್ ಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ
ಈ ವಿಡಿಯೋವನ್ನು ತಮ್ಮ ವಾಲ್ ನಲ್ಲಿ ಹಾಕಿಕೊಂಡಿರುವ ಅವರು, “ಇದನ್ನ ಯಾರ್ ಮಾಡಿರೋದೋ ಗೊತ್ತಿಲ್ಲ.. ಆದ್ರೆ ಸಖತ್ತಾಗ್ ಮಾಡಿದ್ದಾರೆ.. ಒಂದೇ ಸುದ್ದಿ, ಎರೆಡೆರೆಡು ಆ್ಯಂಗಲ್.. ಆದ್ರೆ ದುರಂತ ಏನ್ ಗೊತ್ತಾ..? ಇದನ್ನ ಶೇರ್ ಮಾಡಿರೋರೇ ಚಂದನ ನೋಡಿ ಯಾವ್ ಕಾಲ ಆಯ್ತೋ ಗೊತ್ತಿಲ್ಲ.. ಅದು ಅವ್ರಿಗೂ ಗೊತ್ತಿರುತ್ತೆ.. ಆದ್ರೆ ಈ ಕ್ರಿಯೇಟಿವಿಟಿ ಸೂಪರ್… ನನ್ ಟ್ರೋಲ್ ನಾನೇ ಶೇರ್ ಮಾಡ್ತಿದೀನಿ ಅಂದ್ರೆ ನಂಗೇ ಖುಷಿಯಾಗಿದೆ ಅಂತ ಅರ್ಥ… ಶೇರ್, ಲೈಕ್ ಮಾಡಿ…ಹಂಗೇ ಅವಾಗವಾಗ ಚಂದನ ವಾರ್ತೆ ನೋಡಿ.. ಹಂಗೇ ಸದ್ಯದಲ್ಲೇ ನಿಮಗೊಂದು ಸರ್‌ಪ್ರೈಸ್ ಇದೆ… ಹೇಳ್ತೀನಿ” ಎಂದು ಬರೆದುಕೊಂಡಿದ್ದಾರೆ.