kharge-slams-modi-government-for-not-fulfilling-promises-made-to-protesting-farmers

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸರಕಾರ, ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ನೀಡಿದ್ದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಮಾಡಿ ಸರಕಾರವನ್ನು ಕುಟುಕಿದ್ದಾರೆ.

ಕೇಂದ್ರ ಸರಕಾರ ವಿವಾದಿತ ಕೃಷಿ ಕಾಯ್ದೆ ಹಿಂಪಡೆಯುವ ಸಂದರ್ಭದಲ್ಲಿ ರೈತರಿಗೆ ಕೆಲವು ಭರವಸೆಯನ್ನು ನೀಡಿತ್ತು. ಆ ಭರವಸೆಗಳ್ಯಾವವೂ ಇದುವರೆಗೆ ಈಡೇರಿಲ್ಲ. ರೈತರು ಶೇ. 50 ರಷ್ಟು ಬೆಂಬಲ ಬೆಲೆ, ಪ್ರತಿಭಟನೆಯ ಸಮಯದಲ್ಲಿ ಹುತಾತ್ಮರಾದ 733 ರೈತ ಕುಟುಂಬಗಳಿಗೆ ಪರಿಹಾರ ಮತ್ತು ರೈತರ ಮೇಲೆ ಹಾಕಲಾಗಿದ್ದ ಪ್ರಖರಣಗಳನ್ನು ಹಿಂಪಡೆಯುವಂತೆ ಬೇಡಿಕೆಯಿಟ್ಟಿದ್ದರು.

ಕಳೆದ ವರ್ಷ ಇದೆ ದಿನ ರೈತರ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡು ವಿವಾದಿತ ಕೃಷಿ ಕಾಯ್ದೆಯನ್ನು ಹಿಂಪಡೆದಿತ್ತು. ಆದರೆ ಇದುವರೆಗೂ ಯಾವುದೇ ಭರವಸೆಗಳೂ ಈಡೇರದ ಕಾರಣ ಮಲ್ಲಿಕಾರ್ಜುನ್ ಖರ್ಗೆ ಅವರು ಟ್ವಿಟ್ ಮಾಡಿ ಸರಕಾರಕ್ಕೆ ಮತ್ತೊಮ್ಮೆ ನೆನಪು ಮಾಡಿದ್ದಾರೆ.

ಇದನ್ನೂ ಓದಿರಿ: ಶ್ರದ್ಧಾ ಹತ್ಯೆ ಪ್ರಕರಣ: ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ತಲೆಬುರುಡೆ, ದವಡೆಯ ಭಾಗ ಪತ್ತೆ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here