ಬಿಡುಗಡೆಯಾಯ್ತು ಕೆಜಿಎಫ್ ನ ಮೊದಲ ಹಾಡು..!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಯುಟುಬ್ ನಲ್ಲಿ ಬಾರಿ ಸದ್ದು ಮಾಡುತ್ತಿದೆ. ಇಡಿ ದೇಶವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಈ ಚಿತ್ರದ ಟ್ರೈಲರ್ ಮಾಡಿದ್ದು, ಈಗ “ಸಲಾಂ ರಾಕಿ ಭಾಯಿ” ಎಂಬ ಮೊದಲ ಮಾಸ್ ಹಾಡು ಸದ್ದು ಮಾಡುತ್ತಿದೆ.

ಪುಲ್ ಮಾಸ್ ಸ್ಟೈಲಲ್ಲಿ ಮೂಡಿಬಂದಿರುವ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ವಿಜಯ್ ಪ್ರಕಾಶ್, ಸಚಿನ್ ಬಸ್ರೂರ್, ಪುನೀತ್ ರುದ್ರನಾಗ್, ಮೋಹನ್, ಸಂತೋಷ ವೆಂಕಿ, ಎಚ್ ಶ್ರೀನಿವಾಸ್ ಮೂರ್ತಿ ಮತ್ತು ವಿಜಯ್ ಯು ಆರ್ ಎಸ್ ಹಾಡಿದ್ದಾರೆ.

 

 

 

ಒಂದೇ ಬಾರಿಗೆ ಐದು ಭಾಷೆಯಲ್ಲಿ ಬಿಡುಗಡೆಯಾಗಿರುವ ಈ ಹಾಡು ತಮಿಳು ಮತ್ತು ತೆಳಗುವಿನಲ್ಲಿಯು ಅತಿ ಹೆಚ್ಚು ವಿಕ್ಷಣೆಯನ್ನು ಪಡೆದುಕೊಂಡಿದೆ. ಹೊಂಬಾಳೆ ಮುಸಿಕ್  ಈ ಹಾಡಿನ ವಿಡಿಯೋವನ್ನು ಯುಟುಬ್ ನಲ್ಲಿ ಅಪ್ ಲೋಡ್ ಮಾಡಿದೆ. ಅಲ್ಲದೇ ಯಶ್ ಅವರು ತಮಿಳು, ಮಲಯಾಳಂ ಮತ್ತು ತೆಲಗು ಭಾಷೆಯ ಹಾಡಿನ ಲಿಂಕನ್ನು ಟ್ವೀಟರ್ ನಲ್ಲಿ  ಶೇರ್ ಮಾಡಿದ್ದಾರೆ.

ಇದನ್ನೂ ಓದಿರಿ : ಪಿಕ್ಸಾಯ್ತು ದಿಗಂತ್ ಮತ್ತು ಐಂದ್ರಿತಾ ರೈ ಅವರ ಮದುವೆ…!!

 

 

image Copyright : google.com

LEAVE A REPLY

Please enter your comment!
Please enter your name here