ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಬಿಡುಗಡೆಯ ಸಂಬಂಧ ಕೋರ್ಟ ತಡೆಯಾಜ್ಞೆ ನೀಡಿ, ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ಆದರೆ ಇಂದು 2000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಮೂಲಕ ಹೊಸ ದಾಖಲೆ ಮಾಡಲು ಸಿದ್ದವಾಗಿದೆ.

ಕೆಜಿಎಫ್ ಇಂದು ಬೆಳಿಗ್ಗೆ 4 ಗಂಟೆಗೆ ಅನೇಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಚಿತ್ರ ನೋಡಿದ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ..ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲಗು, ಹಿಂದಿ, ಮಲಯಾಳಂ ಭಾಶೆಗಳಲ್ಲಿ ತೆರೆ ಕಂಡಿದೆ. ಇನ್ನು ಕರ್ನಾಟಕದಲ್ಲಿ ಸುಮಾರು 350 ಮತ್ತು ಹಿಂದಿ ಅವತರಣಿಕೆ ಸುಮಾರು ಒಂದು ಸಾವಿರ ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ.

ಇದನ್ನೂ ಓದಿರಿ : ಕೆಜಿಎಫ್ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ..!

 

ಎಲ್ಲ ಚಿತ್ರಮಂದಿರಗಳು ಹೌಸ್ ಪುಲ್ ಆಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಪ್ರಾರಂಬವಾದಾಗಿನಿಂದ ಕೊನೆಯವರೆಗೂ ಬೇಸರವೆನಿಸದಂತೆ ಕೊಂಡೊಯ್ಯುತ್ತದೆ. ಯಶ್ ಅವರ ಇತರ ಚಿತ್ರಗಳಂತೆ ಹಿರೋ ಕಾದರ್ ಇಲ್ಲಿಯೂ ಕಾಣಬಹುದಾಗಿದೆ. ಪೈಟಿಂಗ್, ಡಾನ್ಸಿಂಗ್ ಸೇರಿ ಮನರಂಜನೆಗೆ ಏನೂ ಕೊರತೆಯಾಗದಂತೆ ಚಿತ್ರ ಮೂಡಿಬಂದಿದೆ.

ಇನ್ನು ವಿದೇಶಗಳಲ್ಲಿ ಅಮೆರಿಕಾ, ಕೆನಡಾ , ಇಂಗ್ಲೆಂಡ್ಗಳಲ್ಲಿ ತೆರೆ ಕಂಡು ಉತ್ತಮ ಪ್ರತಿಕ್ರೀಯೆ ದೊರೆಯುತ್ತಿದೆ. ಇನ್ನು ಯುರೋಪ್ ರಾಷ್ರಗಳಲ್ಲಿ ಚಿತ್ರ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಚಿತ್ರ ತಂಡ ಹೇಳಿಕೆ ನೀಡಿದೆ.

Image Copyright: google.com

LEAVE A REPLY

Please enter your comment!
Please enter your name here