ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದ KGF ಸಿನಿಮಾ, ಈಗ ಭಾಗ 2 ಬರುವಿಕೆಗಾಗಿ ಪ್ರೇಕ್ಷಕ ಕಾತರದಿಂದ ಕಾಯುವಂತೆ ಮಾಡಿದೆ. ಎರಡನೇ ಭಾಗದ ಚಿತ್ರಿಕರಣವನ್ನು ಶೇ. 90 ರಷ್ಟು ಮುಕ್ತಾಯಗೊಲಿಸಿರುವ ಚಿತ್ರತಂಡ, ಲಾಕ್ ಡೌನ್ ಸಡಿಲಿಕೆಗಾಗಿ ಕಾಯುತ್ತಿದೆ. ಇನ್ನೂ ಕೆಲವು ದಿನಗಳ ಚಿತ್ರೀಕರಣ ನಡೆಸಬೇಕಾಗಿದ್ದು, ಕಥೆಯ ಕೊನೆಯ ಭಾಗವನ್ನು ಶೂಟ್ ಮಾಡಲಾಗುತ್ತಿದೆ.
ಬಡತನದ ಜೀವನದಲ್ಲಿ ಹುಟ್ಟಿ, ಭೂಗತ ಲೋಖವನ್ನು ಸೇರಿ, ಕೆ.ಜಿ.ಎಫ್.ನಲ್ಲಿ ಸಿಲುಕಿದ್ದ ಮುಗ್ದರನ್ನು ರಕ್ಷಿಸುವ ಕಥೆಯನ್ನು ಮನೋಜ್ಞವಾಗಿ ಹೆಣೆದಿದ್ದ ಪ್ರಶಾಂತ್ ನೀಲ್ ಈಗ ಭಾಗ ಎರಡರಲ್ಲಿ ಇನ್ನೂ ಹೆಚ್ಚಿನ ಆಕರ್ಷಣೆಯನ್ನು ಜನರಿಗೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕತೆಗೆ ಭಾಗ 2 ರಲ್ಲಿ ರಾಜಕೀಯದ ಟಚ್ ಸಿಗಲಿದೆ ಎಂದು ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇವೆಲ್ಲವುಗಳ ಮದ್ಯೆ ಈಗ ಕೆ.ಜಿ.ಎಫ್.-2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್ ಆಗಿರುವ ವಿಷಯ ತುಂಬಾನೇ ಸುದ್ದಿಯಾಗಿದೆ.
ರಾಕಿಬಾಯ್ ಜೀತದ ಜನರನ್ನು ಮುಕ್ತಗೊಳಿಸಿದರು ಆತ ಭೂಗತ ಲೋಖದ ದೊರೆ. ಭೂಗತ ಲೋಖದ ಚಟುವಟಿಕೆಗಳು ಎಗ್ಗಿಲ್ಲದೆ ಸಾಗುತ್ತಲಿರುತ್ತವೆ. ಕ್ರಮೇಣ ರಾಕಿಬಾಯ್ ಉಪಟಲವು ಮೀತಿಮೀರಲು ಆರಂಭವಾಗಿ ಹಿರೋನ ದುರಂತ ಅಂತ್ಯದೊಂದಿಗೆ ಕಥೆಯ ಮುಕ್ತಾಯವನ್ನು ಮಾಡಲಿದ್ದಾರೆ. ಈ ಮೂಲಕ ಪ್ರೇಕ್ಷಕನ ಕಣ್ಣಲ್ಲಿ ನೀರುತರಿಸುವ ಯೋಚನೆಯನ್ನು ಚಿತ್ರತಂಡ ಮಾಡಿದೆ ಎಂದು ಹೇಳಲಾಗಿದೆ.
ಭೂಗತ ಲೋಖ ಪ್ರವೇಶಿಸಿದ ರಾಕಿ ಬಾಯ್ ಯಾವುದೋ ಸಾಧನೆಗೋಸ್ಕರ ಕೆ.ಜಿ.ಎಫ್.ನ್ನು ಪ್ರವೇಶಿಸಿ ಅಲ್ಲಿನ ಸಾಮ್ರಾಜ್ಯವನ್ನು ನಾಶಮಾಡುತ್ತಾನೆ. ನಂತರದಲ್ಲಿ ಈತನ ಉಪಟಳ ಹೆಚ್ಚಾಗಿ ಪ್ರಧಾನಿ ಸೇನೆಯನ್ನು ಬಿಟ್ಟು ಕೊಲ್ಲುತ್ತಾಳೆ ಎನ್ನುವ ಕತೆಯು ತುಂಬಾನೇ ಸದ್ದು ಮಾಡುತ್ತಿದೆ. ಈ ಸುದ್ದಿಯು ಎಷ್ಟರಮಟ್ಟಿಗೆ ನಿಜ ಎಂದು ತಿಳಿಯಲು ಪ್ರೇಕ್ಷಕರು ಸಿನಿಮಾ ಬಿಡುಗಡೆಯಾಗುವವರೆಗೆ ಕಾಯುವುದೊಂದೇ ದಾರಿಯಾಗಿದೆ.