ಮನೆ ಮಂದಿಯೇಲ್ಲರ ನೆಚ್ಚಿನ ಕಾರ್ಯಕ್ರಮ ಸರಿಗಮಪ-15 ರ ಪೈನಲ್ ನಲ್ಲಿ ಕಿರ್ತನ್ ಹೊಳ್ಳ ಅವರು ಅದ್ಬುತವಾಗಿ ಹಾಡುವ ಮೂಲಕ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನಪದ ಕೋಗಿಲೆ ಎಂದೇ ಪ್ರಸಿದ್ದರಾದ ಹನುಮಂತ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನ ಕೋರಮಂಗಲದ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪೈನಲ್ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಕಿರ್ತನ್ ಹೊಳ್ಳ, ಸಾದ್ವಿನಿ ಮತ್ತು ಗ್ರಾಮೀಣ ಪ್ರತಿಭೆ ಹನುಮಂತ ಟಾಪ್ ಮೂರು ಸ್ಪರ್ಧಿಗಳಾಗಿ ಆಯ್ಕೆಯಾದರು. ಕೊನೆಯದಾಗಿ ಶಾಸ್ತ್ರಿಯ ಸಂಗೀತ ಕರಗತ ಮಾಡಿಕೊಂಡ ಕೀರ್ತನ್ ಹೊಳ್ಳ ಪ್ರಥಮ, ಗ್ರಾಮೀಣ ಪ್ರತಿಭೆ ಹನುಮಂತ ದ್ವಿತೀಯ ಮತ್ತು ಸಾದ್ವಿನಿ ತ್ರತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಫಿನಾಲೆಯ ಹಂತದಲ್ಲಿ ನೀಡಿದ ಪ್ರದರ್ಶನ, ತೀರ್ಪುಗಾರರ ಸಲಹೆ ಮತ್ತು ಜನರ ಓಟಿಂಗ್ ಆದಾರದ ಮೇಲೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕೀರ್ತನ್ ಅವರನ್ನು ವಿನ್ನರ್ ಎಂದು ಘೋಷಿಸಿದರು. ಈ ಮೂಲಕ ಕೀರ್ತನ್ ಹೊಳ್ಳ ಅವರಿಗೆ ರೂಪಾಯಿ 35 ಲಕ್ಷದ ಅಪಾರ್ಟಮೆಂಟ್, ಹನುಮಂತನಿಗೆ ರೂಪಾಯಿ 15 ಲಕ್ಷದ ಸೈಟ್ ಮತ್ತು ರೂಪಾಯಿ 1 ಲಕ್ಷದ ಚೆಕ್ ನೀಡಲಾಯಿತು. ಪೈನಲ್ ಪ್ರವೇಶಿಸಿದ ಮತ್ತೊಬ್ಬ ಸ್ಪರ್ಧಿ ಸಾದ್ವಿ ಅವರಿಗೆ ರೂಪಾಯಿ 2 ಲಕ್ಷ ನೀಡಿ ಗೌರವಿಸಲಾಯಿತು.
Image Copyright : google.com