ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಲು ಹೆಣಗುತ್ತಿರುವ ಪಾಕಿಸ್ತಾನಕ್ಕೆ, ಮತ್ತೊಂದು ಅವಮಾನ ಉಂಟಾಗಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆ ದೇಶದ ಆಂತರಿಕ ವಿಷಯದಲ್ಲಿ ತಾಲಿಬಾನ್ ಪಾಕಿಸ್ತಾನದ ಜೊತೆಗೆ ಸೇರಲು ಸಾಧ್ಯವಿಲ್ಲ ಎಂದು ಹೇಳಿದೆ.
ತಾಲಿಬಾನ್ ಕಾಶ್ಮೀರದ ಜಿಹಾದ್ ಕ್ರತ್ಯದಲ್ಲಿ ಬಾಗಿಯಾಗಿದೆ ಎಂದು ಆರೋಪಿಸಿರುವ ಟ್ವೀಟ್ ಒಂದಕ್ಕೆ ಉತ್ತರಿಸಿರುವ ತಾಲಿಬಾನ್ ಸಂಘಟನೆಯ ವಕ್ತಾರ ಸುಹೈಲ್ ಶಹೀನ್, ಬೇರೆ ದೇಶಗಳ ಆಂತರಿಕ ವಿಚಾರಗಳಲ್ಲಿ ನಾವು ಮೂಗು ತೂರಿಸುವುದಿಲ್ಲಾ. ಇದು ನಮ್ಮ ಸಂಘಟನೆಯ ಸ್ಪಷ್ಟ ನೀತಿಯಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಸುಹೈಲ್ ಶಹೀನ್ ಭಾರತದ ಪರವಾಗಿ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಅಪಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಭಾರತ ಮಹತ್ವದ ಪಾತ್ರವನ್ನು ವಹಿಸಬಲ್ಲದು ಎಂದು ಹೇಳಿದ್ದರು.