ಈ ಬಾರಿ ಸಾಂಕ್ರಾಮಿಕ ರೋಗದ ಕಾರಣದಿಂದ ಶಾಲೆಗಳು ಹಲವು ದಿನಗಳ ಕಾಲ ತೆರೆಯಲು ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು. ಈಗ ಈ ಸಂಕಷ್ಟಗಳು ದೂರವಾಗಿ ಅಗತ್ಯ ಮುಂಜಾಗ್ರತೆಗಳೊಂದಿಗೆ ಶಾಲೆಗಳು ಕಾರ್ಯಾರಂಭ ಆಗಿದೆ. ಇಂದು ಶಿಕ್ಷಣ ಇಲಾಖೆ 2020-21ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಸದ್ಯ ಈಗ ಪ್ರಕಟವಾಗಿರುವ ಪರೀಕ್ಷೆಯ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಬದಲಾವಣೆ ಬಯಸಿ ಸಲಹೆ ಅಥವಾ ಸೂಚನೆಗಳನ್ನು ನೀಡಲು ಬಯಸಿದಲ್ಲಿ ಅವಕಾಶ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಸದ್ಯ ಪ್ರಕಟವಾಗಿರುವ ತಾತ್ಕಾಲಿಕ ವೇಳಾಪಟ್ಟಿ :
ಜೂನ್ 14 ರಂದು ಪ್ರಥಮ ಭಾಷೆ,
ಜೂನ್ 16 ರಂದು ಗಣಿತ ಪರೀಕ್ಷೆ,
ಜೂನ್ 18 ರಂದು ಇಂಗ್ಲೀಷ್ ಹಾಗೂ ಕನ್ನಡ,
ಜೂನ್ 21 ರಂದು ವಿಜ್ಞಾನ,
ಜೂನ್ 23 ರಂದು ಹಿಂದಿ
ಜೂನ್ 25 ರಂದು ಸಮಾಜ ವಿಜ್ಞಾನ.