ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3533 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್ಲೈನ್ ಮೂಲಕ 12 ಜುಲೈ 2021 ರೊಳಗೆ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ.
ಹುದ್ದೆಗಳ ವಿವರ : ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
ಶೈಕ್ಷಣಿಕ ಅರ್ಹತೆ : ಪಿಯುಸಿ (ಅಥವಾ ಐಟಿಐ 02 ವರ್ಷ/ಡಿಪ್ಲೊಮಾ 03 ವರ್ಷ)
ಒಟ್ಟು ಹುದ್ದೆಗಳ ಸಂಖ್ಯೆ : 3533 ಹುದ್ದೆಗಳು
ಉತ್ತರ ಕನ್ನಡ ಒಟ್ಟೂ ಹುದ್ದೆಗಳು : 108
ವಯೋಮಿತಿ : ಕನಿಷ್ಠ 19 ವರ್ಷ ಗರಿಷ್ಠ 25 ವರ್ಷ
ಗರಿಷ್ಠ ವಯೋಮಿತಿ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷ. ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ.
ವೇತನ ಶ್ರೇಣಿ : ರೂ.23500-47650.
ಅರ್ಜಿ ಆರಂಭ ದಿನಾಂಕ : 25-05-2021
ಅರ್ಜಿ ಕೊನೆ ದಿನಾಂಕ : 12-07-2021
ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 400ರೂಪಾಯಿ, ಪ.ಜಾ, ಪ.ಪಂ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 200ರೂ ಪಾವತಿಸಬೇಕು.
ಅರ್ಜಿ ಸಲ್ಲಿಕೆ ವಿಧಾನ : ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ https://recruitment.ksp.gov.in/index ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅರ್ಹ & ಆಸಕ್ತ ಅಭ್ಯರ್ಥಿಗಳು ಡಾಕ್ಯುಮೆಂಟ್ ಗಳನ್ನು ವ್ಯಾಟ್ಸಪ್ ನಲ್ಲಿ ಕಳುಹಿಸಿದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ +91 9620159964.