ಬೆಂಗಳೂರು (24 ಮೇ): ಲಾಕ್ ಡೌನ್ ಸಡಿಲಿಸಿದ ನಂತರ ಕೊರೊನಾ ತನ್ನ ರೌದ್ರಾವತಾರವನ್ನು ತೋರಿಸುತ್ತಿದ್ದು, ಇಂದು ರಾಜ್ಯದಲ್ಲಿ 130 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಪ್ರಕರಣಗಳು 2089 ಕ್ಕೆ ಏರಿಕೆಯಾದಂತಾಗಿದೆ.
ಇಂದು ಬೆಳಕಿಗೆ ಬಂದ ಪ್ರಕರಣಗಳಲ್ಲಿ 105 ವ್ಯಕ್ತಿಗಳು ಬೇರೆ ರಾಜ್ಯಗಳಿಂದ ಬಂದವರೇ ಆಗಿದ್ದಾರೆ. ಒಬ್ಬ ವ್ಯಕ್ತಿ ರಾಜಸ್ತಾನ ಮತ್ತು ಉಳಿದವರು ಮಹಾರಾಷ್ಟ್ರದಿಂದ ಬಂದು ಕ್ವರಂಟೈನ್ ನಲ್ಲಿ ತಂಗಿರುವ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಅತೀ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ.
ಕೋವಿಡ್19: 24 ಮೇ 2020 ರ ಸಂಜೆಯವರೆಗಿನ ಮಾಹಿತಿ
— CM of Karnataka (@CMofKarnataka) May 24, 2020
ಒಟ್ಟು ಪ್ರಕರಣಗಳು: 2089
ಮೃತಪಟ್ಟವರು: 42
ಗುಣಮುಖರಾದವರು: 654
ಹೊಸ ಪ್ರಕರಣಗಳು: 130
1/3 pic.twitter.com/3hIA0dXaVO
ಇಂದಿನ ಪ್ರಕರಣಗಳನ್ನು ಜಿಲ್ಲಾವಾರು ನೋಡುವುದಾದರೆ ಚಿಕ್ಕಬಳ್ಳಾಪುರ 27, ಯಾದಗಿರಿ 24, ಉಡುಪಿ 23, ಮಂಡ್ಯ 15, ಹಾಸನ 14, ಕಲಬುರಗಿ 6, ಬೀದರ್ 6, ದಾವಣಗೆರೆ 4, ಶಿವಮೊಗ್ಗ 2, ಉತ್ತರ ಕನ್ನಡ 2, ತುಮಕೂರು 2, ದಕ್ಷಿಣ ಕನ್ನಡ 1, ಧಾರವಾಡ 1, ವಿಜಯಪುರ 1, ಕೊಡಗು 1, ಬೆಂಗಳೂರು ನಗರ 1 ಪ್ರಕರಣಗಳು ದಾಖಲಾಗಿವೆ.