ಬೆಂಗಳೂರು (ಜೂನ್ 03): ರಾಜ್ಯದಲ್ಲಿ ಇಂದೂ ಸಹ ಕೊರೊನಾ ರಣಕೇಕೆ ಮುಂದುವರೆದಿದ್ದು, 267 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇಂದಿನ ಪಾಸಿಟಿವ್ ಕೇಸುಗಳಲ್ಲಿ ಬಹುಪಾಲು ಅಂದರೆ 250 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ.
ಇಷ್ಟೊಂದು ಹೊಸ ಪ್ರಕರಣಗಳು ದಾಖಲಾಗುತ್ತಿರುವ ಜೊತೆ ಜೊತೆಗೆ ಹಲವರು ಕೊರೋನಾದಿಂದ ಮುಕ್ತರಾಗಿ ಮನೆಗೆ ತೆರಳುತ್ತಿದ್ದಾರೆ. ಇಂದು 111 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 1514 ಕ್ಕೆ ಏರಿಕೆಯಾಗಿದೆ. ಇನ್ನೂ 2494 ಜನರು ಕೊರೊನಾ ಸೊಂಕಿತರು ವಿವಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇಂದಿನ ಜಿಲ್ಲಾವಾರು ಕೊರೊನಾ ಪಾಸಿಟಿವ್ ಪ್ರಖರಣಗಳನ್ನು ನೋಡುವುದಾದರೆ, ಕಲಬುರಗಿ 105, ಉಡುಪಿ 62, ರಾಯಚೂರು 35, ಬೆಂಗಳೂರು ನಗರ 20, ಮಂಡ್ಯ 13, ಯಾದಗಿರಿ 9, ವಿಜಯಪುರ 6, ದಾವಣಗೆರೆ 3, ದಕ್ಷಿಣ ಕನ್ನಡ 2, ಬಾಗಲಕೋಟೆ 2, ಮೈಸೂರು 2, ಶಿವಮೊಗ್ಗ 2, ಕೋಲಾರ 2, ಧಾರವಾಡ 1, ಬಳ್ಳಾರಿ 1, ಹಾಸನ 1, ಬೆಂಗಳೂರು ಗ್ರಾಮೀಣ 1 ಪ್ರಕರಣಗಳು ದಾಖಲಾಗಿವೆ.
ಕೋವಿಡ್19 ಮಾಹಿತಿ: 3ನೇ ಜೂನ್ 2020
— CM of Karnataka (@CMofKarnataka) June 3, 2020
ಒಟ್ಟು ಪ್ರಕರಣಗಳು: 4063
ಮೃತಪಟ್ಟವರು: 53
ಗುಣಮುಖರಾದವರು: 1514
ಹೊಸ ಪ್ರಕರಣಗಳು: 267
ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, 1/2 pic.twitter.com/O3soIcSCjj