karnataka-sslc-results-announced-71-80-percent-students-passed

ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ. 71.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ರಾಜ್ಯದಾದ್ಯಂತ 8,48,203 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಆದರೆ ಹಲವು ಕಾರಣಗಳಿಂದಾಗಿ 8,11,050 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಬಾರಿ 5,82,314 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾವಾರು  71.80 ರಷ್ಟು ಉತ್ತೀರ್ಣತೆ ಕಂಡುಬಂದಿದೆ ಎಂದು ತಿಳಿಸಿದರು.

ಈ ಬಾರಿ ಚಿಕ್ಕಬಳ್ಳಾಪುರ ಪ್ರಥಮಸ್ಥಾನವನ್ನು ಗಳಿಸಿಕೊಂಡಿದ್ದು, ದ್ವಿತೀಯ ಸ್ಥಾನ ಬೆಂಗಳೂರು ಗ್ರಾಮಾಂತರ ಪ್ರದೇಶ ಪಡೆದುಕೊಂಡಿದೆ. ತ್ರತೀಯ ಸ್ಥಾನವನ್ನು ಮಧುಗಿರಿ ಪಡೆದುಕೊಂಡಿದ್ದು, ಕೊನೆಯ ಸ್ಥಾನ ಯಾದಗಿರಿ ಜಿಲ್ಲೆಗೆ ದಕ್ಕಿದೆ. ಇನ್ನು ಈ ಬಾರಿ ಸರಕಾರಿ ಶಾಲೆಗಳ ಶೇ. 72.79 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಅನುದಾನಿತ ಶಾಲೆಗಳ ಶೇ. 70.60 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.  ಪ್ರತಿಬಾರಿಯಂತೆಯೇ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ. 77.74 ರಷ್ಟು ಉತ್ತೀರ್ಣರಾಗಿದ್ದಾರೆ.

ಇನ್ನು ನಗರ ಮತ್ತು ಗ್ರಾಮೀಣ ಭಾಗದ ಫಲಿತಾಂಶವನ್ನು ನೋಡುವುದಾದರೆ, ನಗರ ಪ್ರದೇಶದ ಶೇ. 73.41 ಮತ್ತು ಗ್ರಾಮೀಣ ಭಾಗದ ಶೇ. 77.18 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಫಲಿತಾಂಶ http://kseeb.kar.nic.in ಮತ್ತು http:/karresults.kar.nic.in  ಗಳಲ್ಲಿ ಲಭ್ಯವಿದ್ದು, ಆಯಾ ಶಾಲೆಗಳಲ್ಲಿ ನಾಳೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here