ಬೆಂಗಳೂರು: 2022-23 ನೇ ಸಾಲಿನ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಂದು ಪ್ರಕಟಿಸಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15 ರ ವರೆಗೆ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಈ ವೇಳಾಪಟ್ಟಿಗೆ ಮಕ್ಕಳು ಮತ್ತು ಪಾಲಕರಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ ನವೆಂಬರ್ 28 ರ ಒಳಗೆ ತಿಳಿಸುವಂತೆ ಸುತ್ತೋಲೆಯಲ್ಲಿ ಕೇಳಿಕೊಂಡಿದೆ. ಏಪ್ರಿಲ್ 1 ರಿಂದ ಪರೀಕ್ಷೆಗಳನ್ನು ಆರಂಭಿಸಿ ಏಪ್ರಿಲ್ 15 ಕ್ಕೆ ಮುಗಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿಯಂತೆ ಏಪ್ರಿಲ್ 1 ರಂದು ಪ್ರಥಮ ಭಾಷೆ, ಏಪ್ರಿಲ್ 4 ರಂದು ಗಣಿತ, ಏಪ್ರಿಲ್ 6 ರಂದು ದ್ವಿತೀಯ ಭಾಷೆ, ಏಪ್ರಿಲ್ 10 ರಂದು ವಿಜ್ಞಾನ, ಏಪ್ರಿಲ್12 ರಂದು ತೃತೀಯ ಭಾಷೆ, ಏಪ್ರಿಲ್ 15 ರಂದು ಸಮಾಜ ವಿಜ್ಞಾನ ಪರೀಕ್ಷೆಗಳನ್ನು ನಡೆಸಲು ಯೋಚಿಸಿದೆ.
ಇದನ್ನೂ ಓದಿರಿ: SSLC Exam 2023: ಪರೀಕ್ಷೆ’ಯ ‘ಅಂತಿಮ ವೇಳಾಪಟ್ಟಿ’ ಪ್ರಕಟ, ಇಲ್ಲಿದೆ ವೇಳಾಪಟ್ಟಿ