ಅ.25ರಿಂದ 1ರಿಂದ 5ನೇ ತರಗತಿ ಶಾಲೆಗಳ ಆರಂಭ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

karnataka-primary-schools-to-reopen-from-october-25

ಬೆಂಗಳೂರು: ಕೊರೋನಾ ಸೋಂಕಿನ ಹಾವಳಿಯಿಂದ ಮುಚ್ಚಲಾಗಿದ್ದ ಶಾಲೆಗಳು ಅಕ್ಟೋಬರ್ 25 ರಿಂದ 1 ರಿಂದ 5 ನೇ ತರಗತಿಗಳು  ಆರಂಭ ಆಗಲಿದೆ ಎಂದು ಅಧಿಕೃತ ಆದೇಶ ಹೊರಡಿಸಲಾಗಿದೆ. 1 ರಿಂದ 5 ನೇ ತರಗತಿ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮೀತಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಶಾಲೆಗಳ ಆರಂಭಕ್ಕೆ ರಾಜ್ಯ ಸರಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದರಂತೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಅಲ್ಲದೇ ಶಿಕ್ಷಕರು ಕಡ್ಡಾಯವಾಗಿ 2 ಡೋಸ್​ ಲಸಿಕೆ ಪಡೆದಿರಬೇಕು. ಆದರೆ, ಮಕ್ಕಳಿಗೆ ಹಾಜರಾತಿ ಕಡ್ಡಾಯ ಇರುವುದಿಲ್ಲ. ಸದ್ಯ ತರಗತಿಯಲ್ಲಿ ಶೇಕಡ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ಎಂದು  ಹೇಳಲಾಗಿದೆ.

ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಶಾಲೆಗೆ ಹಾಜರಾಗುವ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಲು ತಿಳಿಸಲಾಗಿದೆ. ೫೦ ವರ್ಷ ಮೇಲ್ಪಟ್ಟ ಶಿಕ್ಷಕರು ಕಡ್ಡಾಯವಾಗಿ ಫೇಸ್ ಶೀಲ್ಡ್ ಧರಿಸಲು ಸಲಹೆಯನ್ನು ನೀಡಲಾಗಿದೆ. ಇದಲ್ಲದೇ ಅರ್ಧ ದಿನ ಮಾತ್ರ ಶಾಲೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: BEL Recruitment 2021: 88 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

LEAVE A REPLY

Please enter your comment!
Please enter your name here