ಕುಂದಗೋಳ ಶಾಸಕ, ಪೌರಾಡಳಿತ ಸಚಿವ ಶ್ರೀ ಸಿ.ಎಸ್. ಶಿವಳ್ಳಿ ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅಗಲಿದ ಧಿಮಂತ ನಾಯಕನ ಕುರಿತು ಪ್ರಧಾನಿ ಮೋದಿ, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಇಂದು ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಶಿವಳ್ಳಿಯವರು ಕರ್ನಾಟಕಕ್ಕೆ ಸಲ್ಲಿಸಿದ ಸೇವೆಯನ್ನು ನೆನೆಯಬೇಕು. ಈ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ತಿಳಿಸುತ್ತೇನೆ. ಶಿವಲ್ಲಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದರೆ.
My condolences to the family and supporters of Karnataka Minister Shri CS Shivalli.
Shri Shivalli will be remembered for his service to Karnataka. May his soul rest in peace.
— Chowkidar Narendra Modi (@narendramodi) March 22, 2019
ಕುಂದಗೋಳ ಕ್ಷೇತ್ರದಿಂದ ಮೂರುಬಾರಿ ಆಯ್ಕೆಯಾಗಿದ್ದ ಶಿವಳ್ಳಿಯವರು ಜನಾನುರಾಗಿ ಶಾಸಕರಾಗಿದ್ದರು. ಅವರು ಸಮಾಜಕ್ಕೆ ಸಲ್ಲಿಸಿದ ಅನೇಕ ಸೇವೆಗಳಿಂದಾಗಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಮ್ರತರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಬರಿಸುವ ಶಕ್ತಿಯನ್ನು ಆ ದೆವರು ಕರುಣಿಸಲಿ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಕಂಬನಿ ಮಿಡಿದಿದ್ದಾರೆ.
We are deeply saddened by the news of Shri C S Shivalli’s untimely demise, our thoughts and prayers are with his family at this time of grief.https://t.co/Kyj6nSTt20 pic.twitter.com/EPlsCib1Rf
— Congress (@INCIndia) March 22, 2019
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಅಭಿವ್ರದ್ದಿ ಸಚಿವೆ ಜಯಮಾಲಾ ಸೇರಿದಂತೆ ಹಲವು ಗಣ್ಯರು, ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.