karnataka-may-go-for-unlock-in-4-to-5-phases-minister

ಬೆಂಗಳೂರು: ಜೂನ್ 14 ರ ನಂತರ ಏಕಾಏಕಿ ಲಾಕ್ ಡೌನ್ ನಿಯಮ ಸಡಿಲಿಸದೆ, 5 ಹಂತಗಳಲ್ಲಿ ಅನ್ ಲಾಕ್ ಪ್ರಕ್ರಿಯಿಯೇ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೋನಾ ಸಾವುಗಳು ಮತ್ತು ಹೊಸ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು, ಕೋವಿಡ್ ಪ್ರಮಾಣವನ್ನು ಇನ್ನೂ ತಗ್ಗಿಸುವ ಗುರಿಯನ್ನು ಸರಕಾರ ಹೊಂದಿದೆ. ಈ ನಿಟ್ಟಿನಲ್ಲಿ ಒಮ್ಮೆಲೇ ಅನ್ ಲಾಕ್ ಮಾಡದೇ ನಾಲ್ಕರಿಂದ ಐದು ಹಂತಗಳಲ್ಲಿ ಸಡಿಲಿಕೆ ಮಾಡಲಾಗುತ್ತದೆ ಎಂದು ಹೇಳಿದರು.




ಇದನ್ನೂ ಓದಿರಿ: Live Updates: ದೇಶದ ಜನತೆಗೆ ಮೋದಿ ಭರ್ಜರಿ ಸಿಹಿಸುದ್ದಿ !

ಮೊದಲ ಹಂತದಲ್ಲಿ ಯಾವೆಲ್ಲ ಸಡಿಲಿಕೆಗಳನ್ನು ನೀಡಬೇಕು, ಅನ್ ಲಾಕ್ ರೂಪು ರೇಷೆಗಳ ಕುರಿತಾಗಿ ಚರ್ಚೆ ನಡೆಯುತ್ತಿದೆ. ಆದರೆ, ಜೂನ್ 14ರ ನಂತರ ರಾಜ್ಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಬೆಳಿಗ್ಗೆ 6 ರಿಂದ 10 ರ ನಡುವಿನ ಸಮಯದ ಮಿತಿಯನ್ನು ಹೆಚ್ಚಿಸಬಹುದು. ಅನ್ ಲಾಕ್ ಪ್ರಕ್ರಿಯೆಯ ಕುರಿತು ಚರ್ಚಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜೂನ್ 11 ಅಥವಾ 12 ರಂದು ಸಚಿವರು, ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆಯುವ ಸಾಧ್ಯತೆ ಇದೆ. ಅಲ್ಲಿ ತಜ್ಞರು ಮತ್ತು ಸಚಿವರುಗಳಿಂದ ಬರುವ ಸಲಹೆಗಳನ್ನು ಪಡೆದು ಅಂತಿಮವಾಗಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here