ಲೋಕಸಭೆಯಲ್ಲಿ ಮರಾಠಿಗರ ಮೇಲೆ ಕನ್ನಡಿಗರಿಂದ ಹಲ್ಲೆ ಎಂದ ಎನ್ ಸಿಪಿ ಸಂಸದೆ ಸುಪ್ರಿಯಾ ಸುಲೆ

karnataka-maharashtra-border-dispute-echoed-in-lok-sabha-ncp-mp-accuses-karnataka-peaple

ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲೂ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರತಿಧ್ವನಿಸಿದೆ. ಅಧಿವೇಶದಲ್ಲಿ ಕನ್ನಡಿಗರು ಮಹಾರಾಷ್ಟ್ರದ ಜನರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎನ್ ಸಿಪಿ ಸಂಸದೆ ಸುಪ್ರಿಯಾ ಸುಲೆ ಹೇಳಿದ್ದಾರೆ.

ಇಂದು ಅಧಿವೇಶನದಲ್ಲಿ ಸುಪ್ರಿಯಾ ಸುಲೆ ಮಾತನಾಡುತ್ತ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ಮೂಗು ತುರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕರ್ನಾಟಕದ ಸಿಎಂ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಹಾರಾಷ್ಟ್ರದವರ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕೇಳಿದ್ದಾರೆ.

ಇದನ್ನೂ ಓದಿರಿ: ದೆಹಲಿಯಲ್ಲಿ ಕೇಜ್ರಿವಾಲ್ ಮ್ಯಾಜಿಕ್; 15 ವರ್ಷದ ಬಿಜೆಪಿ ಹಿಡಿತ ಅಂತ್ಯ

ಸುಪ್ರಿಯಾ ಈ ಹೇಳಿಕೆ ಬರುತ್ತಿದ್ದಂತೆ ಶಿವಕುಮಾರ್ ಉದಾಸಿಯವರು ಮದ್ಯ ಪ್ರವೇಶಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿದೆ. ಹೀಗಾಗಿ ಅಧಿವೇಶನದಲ್ಲಿ ಈ ಕುರಿತು ಮಾತ್ರನಾಡುವುದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಲೋಕಸಭಾ ಸ್ಪೀಕರ್ ಸಹ ಸಹಮತ ವ್ಯಕ್ತಪಡಿಸಿದ್ದು, ಗಡಿ ವಿವಾದ ಕುರಿತಂತೆ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ ಬಸ್‌ಗೆ ಮತ್ತೆ ಮಸಿ; ಮುಂದುವರಿದ ಎಂಇಎಸ್ ಪುಂಡಾಟಿಕೆ

LEAVE A REPLY

Please enter your comment!
Please enter your name here