karnataka-lockdown-extension-cm-bs-yediyurappa-take-note-of-coronavirus-situation-in-state-decides-to-continue-lockdown-in-11-districts

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳು ಇಂದು ಬೆಳಗ್ಗೆಯಿಂದ ಜಿಲ್ಲಾಧಿಕಾರಿಗಳು ಮತ್ತು ಸಚಿವರುಗಳ ಜೊತೆಯಲ್ಲಿ ಒಂದಾದ ನಂತರ ಒಂದರಂತೆ ಸಭೆಗಳನ್ನು ನಡೆಸಿ, ಶೇ. 10 ಕ್ಕಿಂತ ಪಾಸಿಟಿವಿಟಿ ಹೆಚ್ಚಿರುವ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಅನ್​ಲಾಕ್ ಘೋಷಣೆ ಮಾಡಿದ್ದಾರೆ.

ರಾಜ್ಯದ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಂದಿನಂತೆಯೇ ಜೂನ್ 20 ರ ವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಮೊದಲ ಹಂತದ ಅನ್​ಲಾಕ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿರಿ: Lockdown: ಪೋಲೀಸರು ಜಪ್ತಿ ಮಾಡಿದ ವಾಹನ ವಾಪಸ್ ಪಡೆಯೋದು ಹೇಗೆ ? ಇಲ್ಲಿದೆ ಫುಲ್ ಡೀಟೆಲ್ಸ್

ರಾಜ್ಯ ಸರಕಾರ ಜೂನ್ 14 ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತಿದ್ದು, ಈಗಿರುವ ಅಗತ್ಯ ಸಾಮಗ್ರಿಗಳನ್ನು ಕೊಳ್ಳುವ ಅವಕಾಶದ ಸಮಯವನ್ನು ಹೆಚ್ಚಿಸಿ ಬೆಳಗ್ಗೆ 6 ಗಂಟೆಯಿಂದ 2 ಗಂಟೆವರೆಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಇನ್ನು ನಿರ್ಮಾಣ ಚಟುವಟಿಕೆಗಳಿಗೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಪ್ರಮುಖ ಸಿಮೆಂಟ್ ಮತ್ತು ಸ್ಟೀಲ್ ಅಂಗಡಿ ತೆಗೆಯಲು ಅವಕಾಶವಿದೆ. ಕೈಗಾರಿಕೆಗಳಿಗೆ ಹೆಚ್ಚಿನ ವಿನಾಯಿತಿ ನೀಡಲಾಗಿದ್ದು, ಶೇ. 50 ರಷ್ಟು ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಲಾಗಿದೆ. ಇದಲ್ಲದೆ ಗಾರ್ಮೆಟ್ ಉದ್ಯಮಕ್ಕೆ ಶೇ. 30 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿರಿ: ರಾಜ್ಯದ 11 ಜಿಲ್ಲೆಗಳಿಗಿಲ್ಲ ಅನ್​ಲಾಕ್ ಭಾಗ್ಯ.. ಒಂದು ವಾರ ಲಾಕ್​ಡೌನ್ ಮುಂದುವರಿಕೆ

ರಾಜ್ಯದಲ್ಲಿ ಲಾಕ್ ಡೌನ್ ಬಾಗಶಃ ಸಡಿಲಿಕೆ ಮಾಡಲಾಗಿದ್ದು, ಆದರೆ ಕೆ ಎಸ್ ​ಆರ್​ ಟಿ ಸಿ ಮತ್ತು ಬಿ ಎಂ ಟಿ ಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇನ್ನು ಮದ್ಯ ಪ್ರೀಯರಿಗೆ ಸಹ ಹೆಚ್ಚಿನ ಅವಕಾಶ ನೀಡಿದ್ದು, ಮದ್ಯಾಹ್ನ 2 ಗಂಟೆಯ ವರೆಗೆ ಪಾರ್ಸಲ್ ಖರೀದಿ ಮಾಡಬಹುದು. ಬಾರ್ ಮತ್ತು ರೆಸ್ಟೋರೆಂಟ್​, ವೈನ್​ ಸ್ಟೋರ್, ಎಂ ಎಸ್​ ಐ ಎಲ್​ ಗಳಲ್ಲಿ ಮಧ್ಯಾಹ್ನ 2 ರವರೆಗೆ ಪಾರ್ಸೆಲ್​ ಒಯ್ಯಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಜೂನ್ 14 ರ ನಂತರ ಪ್ರತಿದಿನ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕೊವಿಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ. ಇದಲ್ಲದೇ ವೀಕೆಂಡ್ ಗಳಲ್ಲಿಯೂ ಕರ್ಪ್ಯೂ ಜಾರಿಗೊಳಿಸಲು ನಿರ್ಧರಿಸಿದ್ದು, ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಅನವಶ್ಯಕ ಸಂಚಾರಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here