ಚಾಮರಾಜನಗರ: ಕೊಳಚೆ ನಿರ್ಮೂಲನಾ ಮಂಡಲಿ ಇಲಾಖೆಯಿಂದ ಕೊಳ್ಳೇಗಾಲದ ಬಾಪುನಗರ ಬಡಾವಣೆಗೆ ಮಂಜೂರಾಗಿರುವ 20 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಶಾಸಕ ಎನ್.ಮಹೇಶ್ ಅವರು ಗುದ್ದಲಿ ಪೂಜೆ ನಡೆಸಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಾಪುನಗರ ಬಡಾವಣೆಯಲ್ಲಿನ ಸ್ಲಮ್ ನಲ್ಲಿನ ಕೊಳಚೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಕಾಮಗಾರಿಗೆ ಶಾಸಕ ಏನ್ ಮಹೇಶ್ ಅವರು ಶಂಕು ಸ್ಥಾಪನೆ ಮಾಡಿ ಮಾತನಾಡಿದರು. ಈ ಬಡಾವಣೆಗೆ ೨೦ ಲಕ್ಷ ರೂಪಾಯಿ ಅನುಧಾನ ಮಂಜೂರು ಮಾಡಲಾಗಿದ್ದು, ಈ ಹಣದಲ್ಲಿ ಬಡಾವಣೆಗೆ ಉತ್ತಮ ರಸ್ತೆ ಮತ್ತು ಬೃಹತ್ಬ ಒಳಚರಂಡಿ ಕಾಲುವೆ ನಿರ್ಮಿಸಲಾಗುವುದು ಎಂದು ಹೇಳಿದರು. ಈ ಸ್ಲಮ್ ಕೊಳಚೆಗಳಿಂದ ಮುಕ್ತವಾಗಿ ಅಭಿವೃದ್ಧಿ ಹೊಂದಬೇಕು, ಅಲ್ಲದೇ ಬಡಾವಣೆಯ ನಿವಾಸಿಗಳು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸಹಕರಿಸಿ, ಗ್ರಾಮಕ್ಕೆ ಅನುಕೂಲ ಮಾಡಿಕೊಳ್ಳಿ ಎಂದು ಸಲಹೆಯನ್ನು ನೀಡಿದರು.
ಇದನ್ನು ಓದಿರಿ: ಜುಲೈ 20 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಫಲಿತಾಂಶ ನೋಡುವುದು ಹೇಗೆ ? ಇಲ್ಲಿದೆ ಮಾಹಿತಿ