karnataka-govt-orders-about-his-employee-salary-via-6th-pay-scale

ಬೆಂಗಳೂರು: ರಾಜ್ಯ ಸರ್ಕಾರ 6 ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಮತ್ತು ಭತ್ಯೆಗಳನ್ನು ಯಾವುದೇ ಬದಲಾವಣೆ ಇಲ್ಲದಂತೆ ರಾಜ್ಯ ಸರಕಾರಿ ನೌಕರರುಗಳಿಗೆ ನೀಡುವಂತೆ ವೇತನವನ್ನು ಪರಿಷ್ಕರಿಸಿ ಆದೇಶವನ್ನು ಹೊರಡಿಸಿದೆ.

ರಾಜ್ಯ ಸರಕಾರಿ ನೌಕರರಿಗೆ ನೀಡಲಾಗುತ್ತಿದ್ದ ಹಬ್ಬದ ಮುಂಗಡವನ್ನು ಯಾವುದೇ ಬದಲಾವಣೆ ಇಲ್ಲದಂತೆ ಈ ಬಾರಿಯೂ ನೀಡುವಂತೆ ಸರಕಾರ ಶಿಫಾರಸ್ಸು ಮಾಡಿದೆ. ರಾಜ್ಯ ಸಿವಿಲ್ ವೃಂದಕ್ಕೆ ಖಾಯಂ ಆಗಿ ಸೇರಿರುವ ಮತ್ತು ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿ ಖಾಯಂ ಸರಕಾರಿ ನೌಕರರಿಗೆ ಆರ್ಥಿಕ ವರ್ಷದಲ್ಲಿ ಒಂದುಬಾರಿಗೆ ನೀಡಲಾಗುತ್ತಿದ್ದ ಹಬ್ಬಗಳ ಬಡ್ಡಿರಹಿತ ಮುಂಗಡ ಹಣವನ್ನು 5000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.

ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದಿಂದಾಗಿ ಆರ್ಥಿಕ ಸಂಕಷ್ಟದ ನಡುವೆಯೂ ರಾಜ್ಯಸರ್ಕಾರ ಈ ಆದೇಶವನ್ನು ಹೊರಡಿಸಿದ್ದು, ಸಂಕಷ್ಟದಲ್ಲಿರುವ ಸರಕಾರಿ ನೌಕರರಿಗೆ ಹಬ್ಬದ ವಿಶೇಷ ಕೊಡುಗೆಯಾಗಿದೆ. 2012 ರಿಂದೀಚೆಗೆ 5000 ಇರುವ ಬಡ್ಡಿರಹಿತ ಮುಂಗಡವನ್ನು 10000 ಕ್ಕೆ ಹೆಚ್ಚಿಸಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಈ ಮೊತ್ತಕ್ಕೆ ಯಾವುದೇ ತಡೆಯನ್ನು ಹಾಕದೆ ಮೊದಲಿನಂತೆಯೇ ಈ ಬಾರಿಯೂ 10000 ಮುಂಗಡ ಪಡೆಯಲು ಸರಕಾರ ಅವಕಾಶ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here