karnataka-cm-will-be-changed-after-election-says-yatnal

ವಿಜಯಪುರ: ಸದಾ ತಮ್ಮ ನೇರವಾದ ಮಾತುಗಳಿಂದ ವಿವಾದ ಹುಟ್ಟುಹಾಕುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿದ್ದಾರೆ.

ವಿಜಯಪುರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಂಚರಾಜ್ಯಗಳ ಚುನಾವಣೆ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬದಲಾವಣೆ ಖಚಿತ ಎಂದು ಹೇಳಿದ್ದಾರೆ. ಉತ್ತರಖಾಂಡ್ ರೀತಿಯಲ್ಲಿಯೇ ಕರ್ನಾಟಕ ಮತ್ತು ಹರಿಯಾಣ ಮುಖ್ಯಮಂತ್ರಿಗಳ ಬದಲಾವಣೆ ಮಾಡಲಾಗುತ್ತದೆ. ದಕ್ಷಿಣದಲ್ಲಿ ಪಕ್ಷದ ಕೊನೆಯ ಮುಖ್ಯಮಂತ್ರಿ ಇವರೇ ಎಂದಾಗಬಾರದು ಇನ್ನೂ ಹಲವರು ಮುಖ್ಯಮಂತ್ರಿ ಆಗಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿರಿ: ಮುಖೇಶ್ ಅಂಬಾನಿ ಬಂಗಲೆ ಬಳಿ ಸ್ಫೋಟಕ ಪತ್ತೆ: ಅಪರಾಧ ದೃಶ್ಯ ಮರುಸೃಷ್ಟಿಸಿದ ಎನ್ಐಎ

LEAVE A REPLY

Please enter your comment!
Please enter your name here