karnataka-bypolls-bjps-rajesh-gouda-wins-by-12418-votes-in-sira

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಷ್ಠೆಯಾಗಿ ಸ್ವೀಕರಿಸಿ, ಪ್ರಭಲ ಸ್ಪರ್ಧೆಯನ್ನು ಒಡ್ಡಿದ್ದವು. ಇವೆಲ್ಲವುಗಳ ನಡುವೆ ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ ಅವರು 12,418 ಮತಗಳ ಗೆಲುವನ್ನು ಸಾಧಿಸುವ ಮೂಲಕ ಅಧಿಕಾರದಲ್ಲಿರುವ ಪಕ್ಷಕ್ಕೆ ಭಲವನ್ನು ತುಂಬಿದ್ದಾರೆ.

ಇದನ್ನೂ ಓದಿರಿ: ಆರ್ ಆರ್ ನಗರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ

ತುಮಕೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ ಮತಎಣಿಕೆ ಕಾರ್ಯ ಆರಂಭವಾದಾಗಿನಿಂದಲೂ ಬಿಜೆಪಿ ಮುನ್ನಡೆಯನ್ನು ಸಾಧಿಸಿಕೊಂಡು ಬಂದಿತು. ಈ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಗೌಡ, ಕಾಂಗ್ರೆಸ್ ನಿಂದ ಟಿಬಿ ಜಯಚಂದ್ರ ಮತ್ತು ಜೆಡಿಎಸ್ ನಿಂದ ಅಮ್ಮಾಜಮ್ಮ ಸ್ಪರ್ದಿಸಿದ್ದರು. ಬಿಜೆಪಿಯ ರಾಜೇಶ್ ಗೌಡ 72,739 ಮತಗಳು, ಕಾಂಗ್ರೆಸ್ ನ ಟಿ.ಬಿ ಜಯಚಂದ್ರ 60,321 ಮತಗಳು ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 34,707 ಮತಗಳನ್ನು ಗಳಿಸಿದರು. ಆ ಮೂಲಕ ಬಿಜೆಪಿಯ ರಾಜು ಗೌಡ ಅವರು 12,418 ಮತಗಳ ಅಂತರದಿಂದ ಜಯಗಳಿಸಿದರು.

ಮತ ಎಣಿಕೆಯ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಕೊನೆಯಲ್ಲಿ ಬಿಜೆಪಿ ಗೆಲುವಿನ ನಗೆಯನ್ನು ಬೀರಿದೆ. ಇದರೊಂದಿಗೆ ಶಿರಾದಲ್ಲಿ ಮೊದಲಬಾರಿಗೆ ಬಿಜೆಪಿ ಅಧಿಕಾರವನ್ನು ಹಿಡಿದಂತಾಗಿದೆ.

ಇದನ್ನೂ ಓದಿರಿ: BREAKING : ಮಾಜಿ ಮುಖ್ಯಮಂತ್ರಿ ಪುತ್ರನ ಕಾರು ಅಪಘಾತ: ಮಗ ಸೊಸೆಗೆ ಗಾಯ..!

LEAVE A REPLY

Please enter your comment!
Please enter your name here