ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕದ 5 ಕ್ಷೇತ್ರಗಳ ಉಪಚುನಾವಣೆಯ ಪಲಿತಾಂಶ ಪ್ರಕಟವಾಗಿದ್ದು, ಯಾವ ಯಾವ ಕ್ಷೇತ್ರದಲ್ಲಿ ಯಾರ್ಯಾರು ಗೆದ್ದಿದ್ದಾರೆ ಎಂಬ ಪುಲ್ ಡಿಟೇಲ್ಸ್ ಇಲ್ಲಿ ನೀಡಲಾಗಿದೆ.

ನವೆಂಬರ್ 3, ರಂದು ನಡೆದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳಾದ ಜಮಖಂಡಿ ಹಾಗೂ ಬಳ್ಳಾರಿಯಲ್ಲಿ ಕಾಂಗ್ರೆಸ್ ಜಯಗಳಿಸಿದರೆ ರಾಮನಗರ ಹಾಗೂ ಮಂಡ್ಯ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಬಿಜೆಪಿಗೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ವಿರುದ್ಧ  ಜಯಗಳಿಸಲು ಮಾತ್ರ ಸಾಧ್ಯವಾಯಿತು. 

5 ಕ್ಷೇತ್ರಗಳ ಪಲಿತಾಂಶದ ಪೂರ್ಣ ವಿವರ ಇಂತಿದೆ

ಶಿವಮೊಗ್ಗ ಲೋಕಸಭಾ ಕ್ಷೇತ್ರ :

ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ. ರಾಜವೇಂದ್ರ ಅವರು ಕಾಂಗ್ರೆಸ್ ನ ಮಧು ಬಂಗಾರಪ್ಪ ವಿರುದ್ಧ 52,148 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

ಬಳ್ಳಾರಿ ಲೋಕಸಭಾ ಕ್ಷೇತ್ರ :

ಕಾಂಗ್ರಸ್ ನ ವಿ.ಎಸ್.ಉಗ್ರಪ್ಪ ಅವರು ಪಿಜೆಪಿಯ ಜೆ. ಶಾಂತಾ ವಿರುದ್ಧ 2,43,161 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರ :

ಜೆಡಿಎಸ್ ನ ಎಲ್.ಆರ್. ಶಿವರಾಮೇಗೌಡ ಅವರು ಬಿಜೆಪಿಯ ಡಾ. ಸಿದ್ದರಾಮಯ್ಯ ಅವರ ವಿರುದ್ಧ 3,24,943  ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

ಜಮಖಂಡಿ ವಿಧಾನಸಭಾ ಕ್ಷೇತ್ರ :

ಕಾಂಗ್ರೆಸಿನ ಆನಂದ್ ನ್ಯಾಮಗೌಡ ಅವರು ಬಿಜೆಪಿಯ ಶ್ರೀಕಾಂತ್ರೆ ಕುಲಕರ್ಣಿ ಅವರ ವಿರುದ್ಧ 39,480 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರ :

ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವರು ಎಲ್.ಚಂದ್ರಶೇಕರ್ ಅವರ ವಿರುದ್ಧ 1,09,137 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಫೋಟೋ ಕ್ರಪೆ : www.google.com 

LEAVE A REPLY

Please enter your comment!
Please enter your name here